ಪ್ರಗತಿವಾಹಿನಿ ಸುದ್ದಿ: ಐಪಿಎಲ್- 2025ರ ಆಟಗಾರರ ಹರಾಜು ಪ್ರಕ್ರಿಯೆ ಆರಂಭವಾಗಿದ್ದು, ಈ ಬಾರಿ ಯಾವ ಆಟಗಾರರು ಯಾವ ತಂಡಕ್ಕೆ ಎಷ್ಟು ಮೊತ್ತಕ್ಕೆ ಹರಾಜಾಗಿದ್ದಾರೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ.
ಸೌದಿಯ ಜೆದ್ದಾ ನಗರದಲ್ಲಿ ಐಪಿಎಲ್ ಆಟಗಾರರ ಹರಾಜು ಪ್ರಕ್ರಿಯೆ ಆರಂಭವಾಗಿದೆ. 10 ಫ್ರಾಂಚೈಸಿಗಳಿಂದ 577 ಆಟಗಾರರ ಪಟ್ಟಿಯಿಂದ ಆಟಗಾರರನ್ನು ಬಿಡ್ ನಲ್ಲಿ ಖರಿದಿಸಲಿದ್ದಾರೆ.
ಶ್ರೇಯಸ್ ಅಯ್ಯರ್ ದಾಖಲೆಯ 26.75 ಕೋಟಿ ರೂಪಾಯಿಗೆ ಪಂಜಾಬ್ ತಂಡದ ಪಾಲಾಗಿದ್ದಾರೆ
ರಿಷಬ್ ಪಂತ್ ದಾಖಲೆಯ 25 ಕೋಟಿಗೆ ಲಖನೌ ತಂಡದ ಪಾಲಾಗಿದ್ದಾರೆ
ಮೊಹಮ್ಮದ್ ಶಮಿ 10ಕೋಟಿ ರೂ.ಗೆ ಸನ್ ರೈಸ್ ಹೈದರಾಬಾದ್ ಪಾಲಾಗಿದ್ದಾರೆ
ಯಜ್ವಿಂದರ್ ಚಹಲ್ 18 ಕೋಟಿ ರೂ.ಗೆ ಪಂಜಾಬ್ ಕಿಂಗ್ಸ್ ಇ ಲೆವೆನ್ ಪಾಲಾಗಿದ್ದಾರೆ
ಅರ್ಷದೀಪ್ ಸಿಂಗ್ 18 ಕೋಟಿ ರೂಪಾಯಿಗೆ ಪಂಜಾಬ್ ತಂಡದ ಪಾಲಾಗಿದ್ದಾರೆ.
ಕಗಿಸೊ ರಬಾಡಾ 10.75 ಕೋಟಿ ರೂಪಾಯಿಗೆ ಗುಜರಾತ್ ತಂಡದ ಪಾಲಾಗಿದ್ದಾರೆ.
ಮಿಚೆಲ್ ಸ್ಟಾಕ್ 11.75 ಕೋಟಿ ರೂಪಾಯಿಗೆ ದೆಹಲಿ ತಂಡದ ಪಾಲಾಗಿದ್ದಾರೆ.
ಮೊಹಮ್ಮದ್ ಸಿರಾಜ್ 12.25 ಕೋಟುಗೆ ಗುಜರಾತ್ ಟೈಟನ್ಸ್ ಪಾಲಾಗಿದ್ದಾರೆ.
ಕನ್ನಡಿಗ ಕೆ.ಎಲ್ ರಾಹುಲ್ 14 ಕೋಟಿ ರೂ.ಗೆ ದೆಹಲಿ ಕ್ಯಾಪಿಟಲ್ ತಂಡದ ಪಾಲು
ನೂರ್ ಅಹ್ಮದ್ 10 ಕೋಟಿ ರೂಗೆ ಚನ್ನೈ ತಂಡದ ಪಾಲು
ಟ್ರೆಂಟ್ ಬೌಲ್ಟ್ 12.5 ಕೋಟಿಗೆ ಮುಂಬ್ಬೈ ತಂಡದ ಪಾಲು
ಜೋಫ್ರಾ ಅರ್ಚರ್ 12.5 ಕೋಟಿ ರೂ.ಗೆ ರಾಜಸ್ಥಾನ ತಂಡದ ಪಾಲು
ಅವೇಶ್ ಖಾನ್ 9.5 ಕೋಟಿ ರೂಗೆ ಲಖನೌ ತಂಡದ ಪಾಲು
ಜೋಶ್ ಹ್ಯಾಜಲ್ ವುಡ್ 12.5 ಕೋಟಿ ರೂಗೆ ಆರ್ ಸಿಬಿ ತಂಡದ ಪಾಲು
ಜಿತೇಶ್ ಶರ್ಮಾ 11 ಕೋಟಿ ರೂಗೆ ಆರ್ ಸಿಬಿ ತಂಡದ ಪಾಲು
ಪಿಲ್ ಸ್ಟಾಲ್ 11.5ಕೊಟಿ ರೂ ಗೆ ಆರ್ ಸಿಬಿ ತಂಡದ ಪಾಲು
ಗೇನ್ ಮ್ಯಾಕ್ಸ್ ವೆಲ್ 4.5 ಕೋಟಿ ರೂಗೆ ಪಂಜಾಬ್ ತಂಡದ ಪಾಲು
ಮಿಚೆಲ್ ಮಾರ್ಷ್ 11 ಕೊಟಿಗೆ ಲಖನೌ ತಂಡದ ಪಾಲು
ಆರ್.ಅಶ್ವಿನ್ 9.75 ಕೋಟಿ ರೂ ಗೆ ಚೆನ್ನೈ ತಂಡದ ಪಾಲು
ಹರ್ಷಲ್ ಪಟೇಲ್ 8 ಕೋಟಿ ರೂ.ಗೆ ಹೈದರಾಬಾದ್ ತಂಡದ ಪಾಲು
ಡೆವಿಡ್ ವಾರ್ನರ್ – ಐಪಿಎಲ್ ಹರಾಜಿನಲ್ಲಿ ಲೆಜೆಂಡ್ ಎಂದು ಕರೆಯಲ್ಪಡುವ ಆಸ್ಟ್ರೇಲಿಯಾ ಆಟಗಾರ ಡೆವಿಡ್ ವಾರ್ನರ್ ಅನ್ ಸೋಲ್ಡ್ ಆಗಿದ್ದಾರೆ.
ಕನ್ನಡಿಗ ದೇವದತ್ ಪಡಿಕ್ಕಲ್ ಕೂಡ ಅನ್ ಸೋಲ್ಡ್ ಆಗಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ