
ಪ್ರಗತಿವಾಹಿನಿ ಸುದ್ದಿ; ಲಂಡನ್: ಐಪಿಎಲ್ ಮತ್ತು ಟಿ 20 ಮಾದರಿಯ ಕ್ರಿಕೇಟ್‌ನಿಂದಾಗಿ ಟೆಸ್ಟ್ ಕ್ರಿಕೇಟ್ ನೇಪಥ್ಯಕ್ಕೆ ಸರಿಯುವ ಕಾಲ ಸನ್ನಿಹಿತವಾಗಿದೆ ಎಂದು ಇಂಗ್ಲೆಂಡ್‌ನ ಮಾಜಿ ಆಲ್‌ರೌಂಡರ್ ಡೆವಿಡ್ ಲಾಯ್ಡ್ ಆತಂಕ ವ್ಯಕ್ತಪಡಿಸಿದ್ದಾರೆ.
ಜನ ಹೊಡಿ ಬಡಿ ಆಟದ ಮಾದರಿಯಾದ ಟಿ 20 ಮತ್ತು ಐಪಿಎಲ್‌ನಂತಹ ಕ್ರಿಕೇಟ್ ಪಂದ್ಯಾವಳಿಯನ್ನು ಹೆಚ್ಚು ಇಷ್ಟಪಡುತ್ತಿದ್ದಾರೆ. ವಾಸ್ತವದಲ್ಲಿ ಟಿ 20 ಮಾದರಿಯ ಕ್ರಿಕೇಟ್‌ನಲ್ಲಿ ಕ್ರಿಕೇಟ್‌ನ ಅಸಲಿ ಆಟದ ಸೊಗಡು ಇರುವುದಿಲ್ಲ, ಆದರೂ ಇಂದಿನ ವೇಗದ ಯುಗಕ್ಕೆ ಟಿ 20 ಕ್ರಿಕೇಟ್ ಹೆಚ್ಚು ಜನಪ್ರಿಯವಾಗುತ್ತಿದೆ. ಹಾಗಾಗಿ ಟೆಸ್ಟ್ ಕ್ರಿಕೇಟ್‌ನಂತಹ ಸುಧೀರ್ಘ ಪಂದ್ಯಗಳಿಗೆ ಅವಕಾಶವೂ ಮುಂದಿನ ದಿನಗಳಲ್ಲಿ ಕಡಿಮೆಯಾಗಲಿದೆ. ಇದು ಕ್ರಿಕೇಟ್ ಕ್ರೀಡೆಗೆ ಮಾರಕ ಎಂದು ಅವರು ಆಂಗ್ಲ ದೈನಿಕವೊಂದರಲ್ಲಿ ಬರೆದ ತಮ್ಮ ಲೇಖನದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಲಾಯ್ಡ್ ಅಲ್ಲದೆ ಅನೇಕ ಹಿರಿಯ ಕ್ರಿಕೇಟ್ ಆಟಗಾರರು ಸಹ ಟೆಸ್ಟ್ ಕ್ರಿಕೇಟ್‌ನ ಉಳಿವಿನ ಬಗ್ಗೆ ಚಿಂತಿತರಾಗಿದ್ದಾರೆ. ಇತ್ತೀಚೆಗೆ ಇಂಗ್ಲೆಂಡ್ ಕ್ರಿಕೇಟ್ ತಂಡದ ಮಾಜಿ ನಾಯಕ ಮೈಖೆಲ್ ಆಥರ್ಟನ್ ಕೂಡ ಇಂಥದ್ದೇ ಅಭಿಪ್ರಾಯವನ್ನು ಹಂಚಿಕೊಂಡಿದ್ದರು.
ಅಮಿತ್ ಶಾ ಸಂಚರಿಸುವ ಮಾರ್ಗದಲ್ಲಿ ಅಗ್ನಿ ಅವಘಡ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ