Latest

ಐಪಿಎಲ್ ಆಟಗಾರರ ಹರಾಜು ದಿನಾಂಕ, ಸ್ಥಳ ಘೋಷಣೆ ; ಬೆಂಗಳೂರಲ್ಲೇ ಹರಾಜು

ಪ್ರಗತಿವಾಹಿನಿ ಸುದ್ದಿ ಮುಂಬೈ :  ಪ್ರಸಕ್ತ ಸಾಲಿನ ಐಪಿಎಲ್ ಕ್ರಿಕೇಟ್ ಪಂದ್ಯಾವಳಿಯ ಆಟಗಾರರ ಹರಾಜು ಪ್ರಕ್ರಿಯೆ ಬೆಂಗಳೂರಿನಲ್ಲಿ ಫೆ. ೧೨ ಮತ್ತು ೧೩ರಂದು ನಡೆಯಲಿದೆ ಎಂದು ಐಪಿಎಲ್ ಆಡಳಿತ ಮಂಡಳಿ ಟ್ವಿಟರ್ ಮೂಲಕ ಮಾಹಿತಿ ನೀಡಿದೆ.

ವಿಶ್ವದಾದ್ಯಂತ ಅಪಾರ ಜಪ್ರಿಯತೆ ಪಡೆದಿರುವ ಐಪಿಎಲ್ ಪಂದ್ಯಾವಳಿಯಲ್ಲಿ ಜಗತ್ತಿನ ನಾನಾ ದೇಶಗಳ ಆಟಗಾರರು ಪಾಲ್ಗೊಳ್ಳುತ್ತಾರೆ. ತಂಡಗಳು ಆಟಗಾರರ ಬಿಡ್ ಕರೆದು ಅತೀ ಹೆಚ್ಚಿನ ಮೊತ್ತಕ್ಕೆ ಖರೀದಿಸುತ್ತವೆ. ಹಾಗಾಗಿ ಐಪಿಎಲ್ ಹರಾಜು ಪ್ರಕ್ರಿಯೆ ಬಗ್ಗೆ ಕ್ರಿಕೇಟ್ ಪ್ರಿಯರಿಗೆ ಅತ್ಯಂತ ಕುತೂಹಲದ ಸಂಗತಿಯಾಗಿದೆ.

ಈ ಬಾರಿಯ ಐಪಿಎಲ್ ಸೀಸನ್ ೧೫ರ ಹರಾಜು ಪ್ರಕ್ರಿಯೆ ಫೆ. ೧೨ರಂದು ನಡೆಯುವ ಸಾಧ್ಯತೆಯ ಬಗ್ಗೆ ಈಗಾಗಲೇ ಸೋಷಿಯಲ್ ಮೀಡಿಯಾಗಳಲ್ಲಿ ಕೇಳಿಬಂದಿತ್ತು. ಅದೀಗ ಖಚಿತವಾಗಿದ್ದು ಫೆ. ೧೨ರಂದು ಬೆಳಗ್ಗೆ ೧೧ ಗಂಟೆಗೆ ಹರಾಜು ಆರಂಭವಾಗಲಿದೆ ಎಂದು ಐಪಿಎಲ್ ಅಧೀಕೃವಾಗಿ ತಿಳಿಸಿದೆ.

೧೦ ತಂಡ

ಈ ಬಾರಿ ಐಪಿಎಲ್ ಪಂದ್ಯಾವಳಿಯಲ್ಲಿ ೧೦ ತಂಡಗಳು ಸ್ಪರ್ಧಿಸಲಿವೆ. ಒಟ್ಟು ೭೪ ಪಂದ್ಯಗಳು ನಡೆಯಲಿವೆ. ಆಸ್ಟ್ರೇಲಿಯಾ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ಶ್ರೀಲಂಕಾ , ಬಾಂಗ್ಲಾದೇಶ ಸೇರಿದಂತೆ ಹಲವಾರು ವಿದೇಶಿ ತಂಡಗಳ ಜಗತ್ಪ್ರಸಿದ್ಧ ಆಟಗಾರರು ಹರಾಜಿನಲ್ಲಿ ಇರಲಿದ್ದಾರೆ. ಅಲ್ಲದೇ ಇದೇ ಮೊದಲ ಬಾರಿಗೆ ಭೂತಾನ್‌ನ ಯುವ ಕ್ರಿಕೆಟರ್ ಒಬ್ಬರು ಹರಾಜಿನಲ್ಲಿ ಪಾಲ್ಗೊಳ್ಳಲಿದ್ದಾರೆ. ಅಂತಿಮವಾಗಿ ಯಾರು ಯಾವ ತಂಡಕ್ಕೆ ಲಭ್ಯವಾಗಲಿದ್ದಾರೆ, ಯಾವ ತಂಡ ಹೆಚ್ಚು ಬಲಿಷ್ಠವಾಗಲಿದೆ ಎಂಬ ಲೆಕ್ಕಾಚರ ಕ್ರಿಕೇಟ್ ಪ್ರೇಮಿಗಳು ಈಗಾಗಲೇ ಶುರು ಮಾಡಿದ್ದಾರೆ.

೫೯೦ ಆಟಗಾರರು

ಬಿಸಿಸಿಐ ಈಗಾಗಲೇ ಐಪಿಎಲ್ ಹರಾಜಿನಲ್ಲಿ ಪಾಲ್ಗೊಳ್ಳುವ ೫೯೦ ಆಟಗಾರರ ಪಟ್ಟಿಯನ್ನು ಸಿದ್ಧಪಡಿಸಿದೆ. ಅದರಲ್ಲಿ ೩೭೦ ಭಾರತೀಯ ಆಟಗಾರರಿದ್ದು ಉಳಿದಂತೆ ೨೨೦ ವಿದೇಶಿ ಆಟಗಾರರಿದ್ದಾರೆ. ಕೆಲವು ತಂಡಗಳು ಈಗಾಗಲೇ ನಾಯಕರನ್ನು ಹೊಂದಿದ್ದು ಕೆಲ ತಂಡಗಳು ಸಮರ್ಥ ನಾಯಕತ್ವದ ಹುಡುಕಾಟದಲ್ಲಿದೆ.

ಎಷ್ಟು ಹಣ ಬಾಕಿ ?

ಐಪಿಎಲ್‌ನಲ್ಲಿ ಪ್ರತಿ ತಂಡವು ಆಟಗಾರರಿಗೆ ನೀಡುವ ಸಂಭಾವನೆಯ ಗರಿಷ್ಠ ಮೊತ್ತವನ್ನು ನಿಗದಿಮಾಡಲಾಗಿರುತ್ತದೆ. ಈ ಮೊದಲೇ ಬುಕ್ ಆಗಿರುವ ಆಟಗಾರರನ್ನು ಹೊರತುಪಡಿಸಿ ಪಿಬಿಕೆಎಸ್ ೭೨ ಕೋಟಿ, ಎಸ್‌ಆರ್‌ಎಚ್ ೬೮ ಕೋಟಿ, ಆರ್ ಆರ್ ೬೨ ಕೋಟಿ, ಆರ್‌ಸಿಬಿ ೫೭ ಕೋಟಿ, ಮುಂಬೈ ಇಂಡಿಯನ್ಸ್ ೪೮ ಕೋಟಿ, ಚೆನ್ನೈ ಸೂಪರ್ ಕಿಂಗ್ಸ್ ೪೮ ಕೋಟಿ, ಕೆಕೆಆರ್ ೪೮ ಕೋಟಿ, ಡಿಸಿ ೪೭.೫೦ ಕೋಟಿ, ಹಾಗೂ ಹೊಸ ತಂಡಗಳಾದ ಲಕ್ನೋ ೬೦ ಕೋಟಿ ಅಹಮದಾಬಾದ್ ೫೩ ಕೋಟಿ ಹಣವನ್ನು ತಮ್ಮ ಖಾತೆಯಲ್ಲಿ ಹೊಂದಿವೆ. ಇಷ್ಟೇ ಮೊತ್ತದಲ್ಲಿ ಆಯಾ ತಂಡಗಳು ಉಳಿದ ಆಟಗಾರರನ್ನು ಖರೀದಿಸಬೇಕಿದೆ.

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭೇಟಿ ಮಾಡಿದ ಮುಖ್ಯಮಂತ್ರಿ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button