
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಮ್ಯಾಚ್ ಅಧಿಕೃತ ಘೋಷಣೆ
ಪ್ರಗತಿವಾಹಿನಿ ಸುದ್ದಿ: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಮ್ಯಾಚ್ ನಡೆಯಲಿದೆ ಎಂದು ಕೆ.ಎಸ್.ಸಿ.ಎ ಅಧಿಕೃತವಾಗಿ ಘೋಷಿಸಿದೆ.
ಕೆ.ಎಸ್.ಸಿ.ಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಸುದ್ದಿಗೋಷ್ಠಿ ನಡೆಸಿ, ಅಧಿಕೃತವಾಗಿ ಘೋಷಿಸಿದರು. ಈ ಬಗ್ಗೆ ಜಿಬಿಎ, ಬೆಸ್ಕಾಂ, ಜಲಮಂಡಳಿಗೂ ಮನವಿ ಮಾಡಿದ್ದೇವೆ. ಕೆ.ಎಸ್.ಸಿ.ಎ ಸುರಕ್ಷತೆಗೆ ಹೆಚ್ಚು ಆದ್ಯತೆ ನೀಡಲಿದೆ ಎಂದರು.
ಇತ್ತೀಚೆಗೆ ಗೃಹ ಇಲಾಖೆ ಚಿನ್ನಸ್ವಾಮಿ ಸ್ಟೇಡಿಯಂ ನಲ್ಲಿ ಐಪಿಎಲ್, ಅಂತರಾಷ್ಟ್ರೀಯ ಪಂದ್ಯಗಳನ್ನು ನಡೆಸಲು ಅನುಮತಿ ನೀಡಿತ್ತು.


