ಇದರಲ್ಲಿ 32 ಜನರ ಹೆಸರಿರುವುದು ಮತ್ತು ಉತ್ತರ ಕನ್ನಡ ಜಿಲ್ಲೆಯ ಯಾರೊಬ್ಬರ ಹೆಸರೂ ಇಲ್ಲದಿರುವುದು ಕೂಡ ಪಟ್ಟಿಯ ಬಗ್ಗೆ ಅನುಮಾನಕ್ಕೆ ಕಾರಣವಾಗಿದೆ. ಪೂರ್ಣ ಪ್ರಮಾಣದ ಮಂತ್ರಿಮಂಡಳ ಬುಧವಾರ ರಚನೆಯಾಗುವ ಸಾಧ್ಯತೆ ಇಲ್ಲ. ಹಾಗಾಗಿ ಈ ಪಟ್ಟಿ ನಕಲಿಯಾಗಿರುವ ಸಾಧ್ಯತೆಯೇ ಹೆಚ್ಚು
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ರಾಜ್ಯದ ನೂತನ ಸಚಿವಸಂಪುಟ ಬುಧವಾರ ಮಧ್ಯಾಹ್ನ 2.15ಕ್ಕೆ ಪ್ರಮಾಣ ವಚನ ಸ್ವೀಕರಿಸುವುದು ಖಚಿತವಾಗಿದ್ದು, ಸಚಿವರಾಗುವವರ ಅಂತಿಮ ಪಟ್ಟಿಯನ್ನು ಇನ್ನೂ ಬಹಿರಂಗಪಡಿಸಿಲ್ಲ.
ಬುಧವಾರ ಬೆಳಗ್ಗೆಯೇ ಹೈಕಮಾಂಡ್ ಕೆಲವು ಸಣ್ಣ ಪುಟ್ಟ ವ್ಯತ್ಯಾಸದೊಂದಿಗೆ ಪಟ್ಟಿಯನ್ನು ಕಳಿಸಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೆಲವೇ ಹೊತ್ತಿನ ಮೊದಲು ತಿಳಿಸಿದ್ದಾರೆ.
ಆದರೆ ಮಂಗಳವಾರ ರಾತ್ರಿ ಸಾಮಾಜಿಕ ಜಾಲತಾಣಗಳಲ್ಲಿ ಪಟ್ಟಿಯೊಂದು ಹರಿದಾಡುತ್ತಿದ್ದು, ಇದೇ ಫೈನಲ್ ಎಂದು ಸುದ್ದಿ ಹಬ್ಬಿದೆ. ಇದರಲ್ಲಿ ಸಚಿವರ ಖಾತೆಗಳನ್ನೂ ನಮೂದಿಸಲಾಗಿದೆ.
ಆದರೆ ಯಾರದ್ದೂ ಸಹಿ ಇಲ್ಲದಿರುವುದರಿಂದ ಅಧಿಕೃತ ಘೋಷಣೆಯವರೆಗೆ ಖಚಿತವಾಗಿ ಹೇಳುವಂತಿಲ್ಲ. ಜೊತೆಗೆ ಇನ್ನೂ ಕೆಲವು ಅನುಮಾನಾಸ್ಪದ ಅಂಶಗಳಿವೆ.
ಈ ಪಟ್ಟಿಯಲ್ಲಿ ಬೆಳಗಾವಿ ಜಿಲ್ಲೆಯ ಉಮೇಶ ಕತ್ತಿ, ಬಾಲಚಂದ್ರ ಜಾರಕಿಹೊಳಿ ಮತ್ತು ಪಿ.ರಾಜೀವ ಹೆಸರಿದೆ.
ಆರ್.ಅಶೋಕ, ಶ್ರೀರಾಮುಲು, ವಿಜಯೇಂದ್ರ ಮತ್ತು ಅಶ್ವತ್ಥ ನಾರಾಯಣ ಉಪಮುಖ್ಯಮಂತ್ರಿಗಳಾಗಲಿದ್ದಾರೆ ಎಂದು ಈ ಪಟ್ಟಿಯಲ್ಲಿದೆ.
ಇದು ಅಸಲಿಯೋ, ನಕಲಿಯೋ ಎನ್ನುವುದು ಬುಧವಾರ ಬೆಳಗ್ಗೆ ಖಚಿತವಾಗಲಿದೆ.
ಇದರಲ್ಲಿ 32 ಜನರ ಹೆಸರಿರುವುದು ಮತ್ತು ಉತ್ತರ ಕನ್ನಡ ಜಿಲ್ಲೆಯ ಯಾರೊಬ್ಬರ ಹೆಸರೂ ಇಲ್ಲದಿರುವುದು ಕೂಡ ಅನುಮಾನಕ್ಕೆ ಕಾರಣವಾಗಿದೆ. ಪೂರ್ಣ ಪ್ರಮಾಣದ ಮಂತ್ರಿಮಂಡಳ ಬುಧವಾರ ರಚನೆಯಾಗುವ ಸಾಧ್ಯತೆ ಇಲ್ಲ. ಹಾಗಾಗಿ ಈ ಪಟ್ಟಿ ನಕಲಿಯಾಗಿರುವ ಸಾಧ್ಯತೆಯೇ ಹೆಚ್ಚು
Breaking news – ಫೈನಲ್ ಆಗಬೇಕಿರುವ 2 -3 ವಿಚಾರ ಬಹಿರಂಗ ಪಡಿಸಿದ ಎಂದ ಬೊಮ್ಮಾಯಿ (ವಿಡಿಯೋ ಸಹಿತ)
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ