Kannada NewsLatest

*ಮಹಿಳೆಯರ ಮೇಲೆ ಅತ್ಯಾಚಾರ ಖಂಡನೀಯ: ಬೈಡೆನ್*

ಪ್ರಗತಿ ವಾಹಿನಿ ಸುದ್ದಿ; ಟೆಲ್ ಅವೀವ್: ಮಕ್ಕಳಿಂದ ಹಿರಿಯರವರೆಗೆ, ಅಮೆರಿಕಾ ನಾಗರಿಕರನ್ನು ಒಳಗೊಂಡಂತೆ ಇಸ್ರೇಲ್ ನ ಸಾಕಷ್ಟು ನಾಗರಿಕರನ್ನು ಹಮಾಸ್ ಉಗ್ರರು ಒತ್ತೆಯಾಳಾಗಿರಿಸಿಕೊಂಡಿದ್ದಾರೆ. ಮಕ್ಕಳು, ಸ್ತ್ರೀಯರೆಂಬುದನ್ನು ನೋಡದೇ, ಮನ ಬಂದಂತೆ ಹತ್ಯೆಗೈದಿದ್ದಾರೆ ” ಎಂದು ಅಮೆರಿಕಾ ಅಧ್ಯಕ್ಷ ಜೋ ಬೈಡೆನ್ ಆರೋಪಿಸಿದ್ದಾರೆ.

ಟೆಲ್ ಅವೀವ್ ನಲ್ಲಿ ಮಾತನಾಡಿರುವ, ಜೋ ಬೈಡೆನ್ “ನವಜಾತ ಶಿಶುಗಳೂ ಸೇರಿ ಇಡೀ ಕುಟುಂಬವನ್ನು ಹತ್ಯೆ ಮಾಡಲಾಗಿದೆ. ಕೆಲ ಮಹಿಳೆಯರ ಮೇಲೆ ಅತ್ಯಾಚಾರ ಎಸಗಿ, ಕೆಲವರನ್ನು ಜೀವಂತವಾಗಿ ಸುಟ್ಟುಹಾಕಿದ್ದಾರೆ. ಇವರ ಕೃತ್ಯ ಐಸಿಸ್ ಕೃತ್ಯವನ್ನು ನೆನಪಿಸುವಂತಿದ್ದು, ಇದಕ್ಕೆ ಕ್ಷಮೆಯೇ ಇಲ್ಲ ” ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

Home add -Advt

Related Articles

Back to top button