Kannada NewsKarnataka NewsNationalPoliticsTechWorld

*ಇಸ್ರೋದ ಈ ವರ್ಷದ ಮೊದಲ ಮಿಷನ್ ವಿಫಲ*

ಪ್ರಗತಿವಾಹಿನಿ ಸುದ್ದಿ: ಈ ವರ್ಷದಲ್ಲಿ ಇಸ್ರೋದ ಹಾರಿಸಿದ ಮೊದಲ ಪಿಎಸ್‌ಎಲ್‌ವಿ ಮಿಷನ್ ಉಡಾವಣೆ ವಿಫಲಗೊಂಡಿದೆ.

ಡಿಆರ್‌ಡಿಒದ ವ್ಯೂಹಾತ್ಮಕ ಉದ್ದೇಶಗಳಿಗಾಗಿ ಅಭಿವೃದ್ಧಿಪಡಿಸಲಾಗಿದ್ದ ‘ಅನ್ವೇಷಾ ಇಒಎಸ್- ಎನ್1’ ಹಾಗೂ 14 ಸಹ-ಉಪಗ್ರಹಗಳನ್ನು ಹೊತ್ತುಕೊಂಡು, ಪಿಎಸ್‌ಎಲ್‌ವಿ ಸಿ62 (PSLV-C62) ರಾಕೆಟ್ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಬೆಳಗ್ಗೆ 10:18ಕ್ಕೆ ಉಡಾವಣೆಗೊಂಡಿತ್ತು. 

ಶ್ರೀಹರಿಕೋಟಾದ ಮೊದಲ ಉಡಾವಣಾ ಪ್ಯಾಡ್ (FLP) ನಿಂದ ಭೂ ವೀಕ್ಷಣಾ ಉಪಗ್ರಹವನ್ನು ಕಕ್ಷೆಗೆ ಸೇರಿಸುವುದು ಈ ಕಾರ್ಯಾಚರಣೆಯ ಗುರಿಯಾಗಿತ್ತು.

ರಾಕೆಟ್‌ನ ಆರಂಭಿಕ ಹಂತಗಳು ಯಶಸ್ವಿಯಾಗಿದ್ದವು. ಆದರೆ ಮೂರನೇ ಹಂತದಲ್ಲಿ ತಾಂತ್ರಿಕ ದೋಷ ಕಂಡುಬಂದ ಕಾರಣ ಈ ಮಿಷನ್ ಯಶಸ್ವಿಯಾಗಲಿಲ್ಲ ಎಂದು ಇಸ್ರೋ ಘೋಷಿಸಿದೆ.

Home add -Advt

https://pragativahini.com/exhibition-launched-at-nearby-bus-stand

Related Articles

Back to top button