Latest

ಕಗ್ಗತ್ತಲ ರಾತ್ರಿಯಲ್ಲಿ ಕಕ್ಷೆಯತ್ತ ಚಿಮ್ಮಿತು ಇಸ್ರೋದ 36 ಉಪಗ್ರಹಗಳನ್ನು ಹೊತ್ತ ಅತ್ಯಂತ ಭಾರದ ರಾಕೆಟ್

ಪ್ರಗತಿವಾಹಿನಿ ಸುದ್ದಿ, ಶ್ರೀಹರಿಕೋಟ: 36 ಉಪಗ್ರಹಗಳನ್ನು ಹೊಂದಿರುವ ಇಸ್ರೋದ ಅತ್ಯಂತ ಭಾರವಾದ ರಾಕೆಟ್‌ನ ಉಡಾವಣೆಯ ವಿಡಿಯೊ ಒಂದು ಜಾಲತಾಣದಲ್ಲಿ ವೈರಲ್ ಆಗಿದೆ.

ಸ್ಟಾರ್ಟ್‌ಅಪ್‌ನ 36 ಬ್ರಾಡ್‌ಬ್ಯಾಂಡ್ ಉಪಗ್ರಹಗಳನ್ನು ಹೊತ್ತೊಯ್ಯುವ ಇಸ್ರೋದ ಅತ್ಯಂತ ಭಾರವಾದ ರಾಕೆಟ್‌ನ ಉಡಾವಣೆಯನ್ನು ತೋರಿಸುವ ವೀಡಿಯೊ ಇದಾಗಿದೆ. ಎಲ್ ವಿಎಂ 3 ರಾಕೆಟ್ ಮಧ್ಯರಾತ್ರಿಯ ನಂತರ ಶ್ರೀಹರಿಕೋಟ ಬಾಹ್ಯಾಕಾಶ ನಿಲ್ದಾಣದಿಂದ ತನ್ನ ಮೊದಲ ವಾಣಿಜ್ಯ ಉಪಗ್ರಹ ಉಡಾವಣೆ ಕೈಗೊಂಡಿತು.

ಭಾನುವಾರ ಬೆಳಗಿನಜಾವ 1.42 ಕ್ಕೆ ಎಲ್ಲ 36 ಉಪಗ್ರಹಗಳನ್ನು ಉದ್ದೇಶಿತ ಕಕ್ಷೆಗೆ ಸೇರಿಸುವುದರೊಂದಿಗೆ ಮಿಷನ್ ಯಶಸ್ವಿಯಾಗಿ ಪೂರ್ಣಗೊಂಡಿದೆ ಎಂದು ಇಸ್ರೋ ದೃಢಪಡಿಸಿದೆ.

ಇಸ್ರೋ ಕೈಗೊಂಡ ಯಶಸ್ವಿ ಉಡ್ಡಯನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ. “ಎಲ್ ವಿಎಂ 3 ಆತ್ಮನಿರ್ಭರತ್ವವನ್ನು ಉದಾಹರಿಸುತ್ತದೆ, ಮತ್ತು ಜಾಗತಿಕ ವಾಣಿಜ್ಯ ಉಡಾವಣಾ ಸೇವಾ ಮಾರುಕಟ್ಟೆಯಲ್ಲಿ ಭಾರತದ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುತ್ತದೆ” ಎಂದು ಅವರು ಟ್ವೀಟ್ ಮಾಡಿದ್ದಾರೆ.

ಕರಾಳ ದಿನಾಚರಣೆಗೆ ಮಹಾರಾಷ್ಟ್ರದ ಮುಖಂಡರ ಉಪಸ್ಥಿತಿ; ಎಂಇಎಸ್ ಗೆ ಭರವಸೆ ನೀಡಿದ ಮಹಾ ಸಿಎಂ ಏಕನಾಥ ಶಿಂದೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button