*ಸತೀಶ ಜಾರಕಿಹೊಳಿ ಮನೆಯಲ್ಲಿ ಡಿನ್ನರ್ ಮೀಟಿಂಗ್ ಆಗಿರುವುದು ಸಂತೋಷದ ವಿಚಾರ: ಡಿಕೆಶಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಸಚಿವ ಸತೀಶ್ ಜಾರಕಿಹೊಳಿ ಮನೆಯಲ್ಲಿ ಡಿನ್ನರ್ ಮೀಟಿಂಗ್ ಆಗಿದೆ. ಡಿನ್ನರ್ ಮೀಟಿಂಗ್ ಮಾಡಿರುವುದು ಸಂತೋಷದ ವಿಷಯ. ಅವರು ಊಟ ಮಾಡಿದರೆ ಬೇಡಾ ಅನ್ನಲು ಆಗುತ್ತಾ. ಹೊರಗಡೆಯಿಂದ ಬಂದಿರುತ್ತಾರೆ ಊಟಾ ಮಾಡಲಿ ತಪ್ಪೇನಿದೆ? ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.
ಬೆಳಗಾವಿಯಲ್ಲಿ ಮಧ್ಯಮಗಳ ಜೊತೆ ಮಾತನಾಡಿದ ಅವರು, ಇಂದು ಕೂಡಾ ಮುಖ್ಯಮಂತ್ರಿಗಳು ಅನೇಕ ವಿಚಾರಗಳ ಬಗ್ಗೆ ಮಾತನಾಡಲಿದ್ದಾರೆ. ನಿನ್ನೆ ಕ್ಯಾಬಿನೆಟ್ ನಲ್ಲಿ ಉತ್ತರ ಕರ್ನಾಟಕದ ಬಗ್ಗೆ ಚರ್ಚೆ ಆಗಿದೆ. ಅಸೆಂಬ್ಲಿಯಲ್ಲಿ ಎಲ್ಲಾ ವಿಷಯಗಳನ್ನು ಚರ್ಚೆ ಮಾಡುತ್ತೇವೆ. ಅಸೆಂಬ್ಲಿಯಲ್ಲಿ ಬಿಜೆಪಿಗರಿಗೆ ನಮ್ಮ ಮೇಲೆ ಆಪಾದನೆ ಮಾಡಲು ಏನೂ ಇರಲಿಲ್ಲಾ. ಎಲ್ಲರೂ ಅನೇಕ ಸಲಹೆಗಳನ್ನು ನೀಡಿದ್ದನ್ನು ಸ್ವೀಕಾರ ಮಾಡಿದ್ದೇವೆ ಎಂದರು.
ಭ್ರಷ್ಟಾಚಾರ ಪಿತಾಮಹ ಎಂಬ ವಿಜಯೇಂದ್ರ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ವಿಜಯೇಂದ್ರಗೆ ಉತ್ತರ ನೀಡೋಣ. ಕಾಂಗ್ರೆಸ್ ಪಾರ್ಟಿಗೆ ರಾಜ್ಯ ಎಟಿಎಂ ಆಗಿದೆ ಅಂದಿದ್ದಾರೆ. ಅದನ್ನು ವಿಜಯೇಂದ್ರ ಪ್ರೂವ್ ಮಾಡಬೇಕು. ಯಾವ ಲೆಕ್ಕಾಚಾರದಲ್ಲಿ ವಿಜಯೇಂದ್ರ ಹೇಳಿದ್ದಾರೆ. ಅದಕ್ಕೆ ಉತ್ತರ ವಿಜಯೇಂದ್ರ ನೀಡಬೇಕು ಎಂದು ವಿಜಯೇಂದ್ರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ದೆಹಲಿಯಲ್ಲಿ ಪೊಲೀಸ್ ತನಿಖೆಗೆ ಹಾಜರಾಗುವ ವಿಚಾರವಾಗಿ ಮಾತನಾಡಿದ ಅವರು, ತನಿಖೆಗೆ ದೆಹಲಿ ಪೊಲೀಸ್ ಕರೆದಿದ್ದಾರೆ. ಅಧಿವೇಶನ ಇದ್ದ ಕಾರಣ ಹೋಗಲು ಆಗಿಲ್ಲ. ಮುಂದಿನ ವಾರ ತನಿಖೆಗೆ ಬರುತ್ತೇನೆ ಎಂದಿದ್ದೇನೆ ಎಂದರು.




