EducationElection NewsKannada NewsKarnataka NewsPolitics

ನಿತೀಶ್ ‌ ಕುಮಾರ್‌ ಅಂತವರ ಜೊತೆ ಸರ್ಕಾರ ನಡೆಸುವುದು ಕಷ್ಟ: ಸಚಿವ ಎಂಬಿ ಪಾಟೀಲ್

ಪ್ರಗತಿವಾಹಿನಿ ಸುದ್ದಿ: ಬಿಜೆಪಿಗೆ ಈ ಬಾರಿ ಬಹುಮತ ಬಂದಿಲ್ಲ. ಆದರೂ ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಪ್ರಧಾನ ಮಂತ್ರಿಯಾಗಲಿದ್ದಾರೆ. ಆದರೆ ನಿತೀಶ್ ‌ ಕುಮಾರ್‌ ಅಂತವರ ಜೊತೆ ಸರ್ಕಾರ ನಡೆಸುವುದು ಕಷ್ಟ ಎಂದು ಸಚಿವ ಎಂ.ಬಿ. ಪಾಟೀಲ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಿತೀಶ್ ಕುಮಾರ್ ಅಂತವರನ್ನು ಕಟ್ಟಿಕೊಂಡು ಹೆಣಗಾಡಿದ್ದು ನಮಗೆ ಅನುಭವವಾಗಿದೆ. ಈಗ ಇದು ಮೋದಿ ಅವರ ಅನುಭವಕ್ಕೂ ಬರಲಿದೆ. ರಾಜ್ಯದಲ್ಲಿ ಕಾಂಗ್ರೆಸ್‌ಗೆ 14 ಸಿಟುಗಳು ಬರುತ್ತವೆ ಎಂದುಕೊಂಡಿದ್ದೆವು. ಆದರೆ ಕೇವಲ ಒಂಬತ್ತು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದೇವೆ. ಈ ಹಿನ್ನಡೆಗೆ ಕಾರಣವೇನು ಎಂದು ನಾವು ಆತ್ಮವಾಲೋಕನ ಮಾಡಿಕೊಳ್ಳಲಿದ್ದೇವೆ ಎಂದರು. 

ಅದೇರೀತಿ ಪಕ್ಷದ ಸೋಲಿಗೆ ಯಾರೊಬ್ಬರೂ ಕಾರಣರಲ್ಲ. ಸಚಿವರ ಶಾಸಕರ ಮೌಲ್ಯಮಾಪನ ನಡೆಯುವುದಿಲ್ಲ. ಕಾಂಗ್ರೆಸ್‌ ಪಂಚ ಗ್ಯಾರಂಟಿಗಳ ಜಾರಿ ಜೊತೆಗೆ ಅನೇಕ ಜನಪರ ಕಾರ್ಯಗಳನ್ನು ಮಾಡಿದೆ. ಆದರೆ ಕೆಲ ಕ್ಷೇತ್ರಗಳಲ್ಲಿ ಸೋತಿದ್ದೇವೆ. ಗೆಲ್ಲಬಹುದಾಗಿದ್ದ ಕ್ಷೇತ್ರಗಳು ಕೈಜಾರಲು ಕಾರಣ ಏನು ಎಂಬುದನ್ನು ಚಿಂತಿಸುತ್ತೇವೆ ಎಂದರು.

Home add -Advt

Related Articles

Back to top button