ಬ್ರೇಕ್ ಫಾಸ್ಟ್ ಗೂ ಸೈ, ಬ್ರಂಚ್ ಗೂ ಸೈ

ಮಸಾಲೆ ರೊಟ್ಟಿ

ಮಸಾಲೆ ರೊಟ್ಟಿ ಬೆಳಿಗ್ಗೆ ತಿಂಡಿಗೆ ಹಾಗು ಸಾಯಂಕಾಲ ಸ್ನಾಕ್ಸ್ ಗೂ ಚೆನ್ನಾಗಿರುತ್ತದೆ. ಖಾರ ಖಾರ ವಾಗಿದ್ದು ಬೆಣ್ಣೆಯ ಜೊತೆ ಸವಿಯಲು ರುಚಿಕರವಾಗಿರುತ್ತದೆ.

ಬೇಕಾದ ಸಾಮಗ್ರಿಗಳು :
ಅಕ್ಕಿ ಹಿಟ್ಟು 2 ಬೌಲ್, ಬಿಳಿ ಯಳ್ಳು 1 ಚಮಚ, ಖಾರದ ಪುಡಿ 2 ಚಮಚ, ಹೆಚ್ಚಿದ ಹಸಿಮೆಣಸು 1, ಹೆಚ್ಚಿದ ಕುತ್ತುಂಬ್ರಿ ಸೊಪ್ಪು ಹಾಗು ಕರಿಬೇವಿನ ಸೊಪ್ಪು ಸ್ವಲ್ಪ, ಚಿಕ್ಕದಾಗಿ ಹೆಚ್ಚಿದ ಈರುಳ್ಳಿ 1, ಹಸಿಕೊಬ್ಬರಿ ತುರಿ ಅರ್ಧ ಬೌಲ್, ರುಚಿಗೆ ಉಪ್ಪು, ಹಿಟ್ಟನ್ನು ಕಲೆಸಲು ಮಜ್ಜಿಗೆ ಅಥವಾ ಮೊಸರು.

ಮಾಡುವ ವಿಧಾನ :
ಮಜ್ಜಿಗೆಯನ್ನು ಬಿಟ್ಟು ಮೇಲೆ ಹೇಳಿದ ಸಾಮಗ್ರಿಗಳನ್ನು ಒಂದು ಪಾತ್ರೆಗೆ ಹಾಕಿ ಮಿಕ್ಸ್ ಮಾಡಬೇಕು. ಇದಕ್ಕೆ ಹಿಟ್ಟಿನ ಹದ ನೋಡಿ ಮಜ್ಜಿಗೆಯನ್ನು ಹಾಕಬೇಕು. ಈರುಳ್ಳಿ, ಕೊಬ್ಬರಿ ಹಾಕುವುದರಿಂದ ನೀರು ಬಿಟ್ಟುಕೊಂಡು ಹಿಟ್ಟು ತುಂಬಾ ತೆಳ್ಳಗೆ ಆಗುತ್ತೆ. ರೊಟ್ಟಿಹಿಟ್ಟಿಗಿಂತ ಹಿಟ್ಟುಸ್ವಲ್ಪ ತೆಳ್ಳಗಿರಬೇಕು. ಈ ಹಿಟ್ಟನ್ನು ಬಾಳೆಎಲೆ ಅಥವಾ ಹೋಳಿಗೆ ಪೇಪರ್ ನಲ್ಲಿ ತಟ್ಟಿ ಕಾದ ಕಾವಲಿಮೇಲೆ ಎಣ್ಣೆ ಬಿಟ್ಟು ಬೇಯಿಸಬೇಕು. ಬೆಣ್ಣೆ ಜೊತೆ ತಿಂದರೆ ತುಂಬಾರುಚಿ ಮಸಾಲೆ ರೊಟ್ಟಿ.

-ಸಹನಾ ಭಟ್
ಸಹನಾಸ್ ಕಿಚನ್

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button