Latest

ರಮೇಶ್ ಜಾರಕಿಹೊಳಿ ವಿರುದ್ಧ ಡಿಕೆಶಿ ಹೊಸ ಬಾಂಬ್

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರನ್ನು ಕಂಟ್ರೋಲ್ ನಲ್ಲಿ ಇಡಲು ಐಟಿ ದಾಳಿ ನಡೆಸಿದ್ದಾರೆ. ಉಮೇಶ್ ಬಿ.ಎಸ್.ಯಡಿಯೂರಪ್ಪ ಅವರ ಪಿಎ ಅಲ್ಲ ಎಂದು ಯಾರೂ ಹೇಳಿಲ್ಲ ಎಂದು ಹೇಳುವ ಮೂಲಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೊಸ ಬಾಂಬ್ ಸಿಡಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ಯಡಿಯೂರಪ್ಪ ಅವರನ್ನು ಕಂಟ್ರೋಲ್ ನಲ್ಲಿಡಲು ದೆಹಲಿಯಲ್ಲಿಯೇ ಪ್ಲಾನ್ ಮಾಡಿ ಅವರ ಆಪ್ತರ ಮನೆ ಮೇಲೆ ಐಟಿ ದಾಳಿ ನಡೆದಿದೆ. ಐಟಿ ದಾಳಿ ಹಿಂದೆ ಒಳ ರಾಜಕೀಯವಿದೆ ಎಂದರು.

ಯಾರ್ಯಾರು ಹೋಟೆಲ್ ನಲ್ಲಿ ಕೂತು ಮೀಟಿಂಗ್ ನಡೆಸಿದರು ಎಂಬುದು ಗೊತ್ತಿದೆ.. ದೆಹಲಿಗೆ ಹೋಗಿ ತಮ್ಮ ಮೇಲೆ ದಾಳಿಯಾಗದಂತೆ ನೋಡಿಕೊಂಡರು ಎಂಬುದೂ ಗೊತ್ತಿದೆ. ಅವರ ಮೇಲೂ ತೆರಿಗೆ ಅಧಿಕಾರಿಗಳು ದಾಳಿ ಮಾಡಬೇಕಲ್ಲವೇ? ಎಂದು ಹೇಳುವ ಮೂಲಕ ಪರೋಕ್ಷವಾಗಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧವೂ ಗುಡುಗಿದ್ದಾರೆ.

ನೀರಾವರಿ ಇಲಾಖೆಯಲ್ಲಿ ಕಳೆದ 1 ವರ್ಷದಿಂದ ಗೋಲ್ ಮಾಲ್ ನಡೆಯುತ್ತಿದೆ. ಬೆಂಕಿ ಇಲ್ಲದೇ ಯಾವತ್ತೂ ಹೊಗೆ ಆಡಲ್ಲ. ಐಟಿ ಅಧಿಕಾರಿಗಳು ಏಕಾಏಕಿ ದಾಳಿ ನಡೆಸಲ್ಲ, ಹಲವು ದಿನಗಳಿಂದ ಪ್ಲಾನ್ ಮಾಡಿ ದಾಳಿ ನಡೆಸುತ್ತಾರೆ ಎಂದು ಹೇಳಿದರು.

ರಾಜ್ಯಾದ್ಯಂತ ಹೈ ಅಲರ್ಟ್ ಘೋಷಣೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button