Belagavi NewsBelgaum NewsKarnataka NewsPolitics

*ಕೇಂದ್ರ ಸಚಿವ ಶಿವರಾಜ ಸಿಂಗ್ ಚೌವ್ಹಾಣ್ ಜೊತೆ ಅಭಿವೃದ್ಧಿ ಬಗ್ಗೆ ಮಾತುಕತೆ ನಡೆಸಿದ ಜಗದೀಶ್ ಶೆಟ್ಟರ್*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಲೋಕಸಭಾ ಸದಸ್ಯ ಜಗದೀಶ ಶೆಟ್ಟರ ಅವರು ಕೇಂದ್ರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಸಚಿವರಾದ ಶಿವರಾಜ ಸಿಂಗ್ ಚೌವ್ಹಾಣ್ ಅವರನ್ನು ನವ-ದೆಹಲಿಯ ಸಂಸದ ಭವನದಲ್ಲಿ ಭೇಟಿ ಮಾಡಿ, ಬೆಳಗಾವಿ ಲೋಕಸಭಾ ವ್ಯಾಪ್ತಿಯ ಕೃಷಿ ಕ್ಷೇತ್ರದ ಅಭಿವೃದ್ಧಿಯ ಕುರಿತು ಚರ್ಚಿಸಿದರು.

ಬೆಳಗಾವಿ ತೋಟಗಾರಿಕೆ ಬೆಳೆಗಳನ್ನು ಬೆಳೆಯುವುದಕ್ಕೆ ಹೆಸರು ವಾಸಿಯಾಗಿದೆ. ಇಲ್ಲಿ ದ್ರಾಕ್ಷಿ, ದಾಳಿಂಬೆ, ಮಾವು, ಹಸಿಮೆಣಸಿನಕಾಯಿ ಇತ್ಯಾದಿ ಬೆಳೆಗಳನ್ನು ಬೆಳೆಯಲಾಗುತ್ತಿದ್ದು. ಇವುಗಳು ಪ್ರಧಾನಮಂತ್ರಿ ಬೆಳೆ ವಿಮಾ ಯೋಜನೆಯ ವ್ಯಾಪ್ತಿಗೆ ಸಹ ಒಳಪಟ್ಟಿವೆ.

ವಿವಿಧ ಗ್ರಾಮಗಳಲ್ಲಿ ದಾಖಲಾಗುವ ಮಳೆ ಪ್ರಮಾಣ, ತಾಪಮಾನ ಮತ್ತು ಆರ್ದ್ರತೆ ಬೇರೆ ಬೇರೆ ಆಗಿರುವುದರಿಂದ ಬೆಳೆ ವಿಮಾ ಪರಿಹಾರವನ್ನು ರೈತರಿಗೆ ಪಾವತಿಸುವಲ್ಲಿ ಅನೇಕ ಬಾರಿ ವ್ಯತ್ಯಾಸ ಕಂಡು ಬರುತ್ತಿದೆ. ಇದರಿಂದಾಗಿ ರೈತರಲ್ಲಿ ವೈಮನಸ್ಸು ಉಂಟಾಗತೊಡಗಿದ್ದು, ಆದ ಕಾರಣ ಇದನ್ನು ತಡೆಯಲು ಸದ್ಯ ಗ್ರಾಮ ಪಂಚಾಯತಿ ಮಟ್ಟದಲ್ಲಿ ಹಾಗೂ ಹೋಬಳಿ ಮಟ್ಟದಲ್ಲಿ ಹಾಲಿ ಕಾರ್ಯ ನಿರ್ವಹಿಸುತ್ತಿರುವ ಹವಾಮಾನ ಕೇಂದ್ರಗಳು ಮತ್ತು ಮಳೆ ಮಾಪನ ಕೇಂದ್ರಗಳನ್ನು ಹೊರತು ಪಡಿಸಿ ಇನ್ನು ಹೆಚ್ಚಿನ ಪ್ರಮಾಣದಲ್ಲಿ ಪ್ರಸ್ತಾಪಿತ ಇವುಗಳನ್ನು ಎಲ್ಲ ಗ್ರಾಮ ಪಂಚಾಯತಿ ಮಟ್ಟದಲ್ಲಿ ಹಾಗೂ ಹೋಬಳಿ ಮಟ್ಟದಲ್ಲಿಯೇ ಈ ಕೇಂದ್ರಗಳನ್ನು ಅಳವಡಿಸವುದು ಅವಶ್ಯಕವಾಗಿದ್ದು. ಇದರಿಂದ ರೈತರಿಗೆ ಅವರು ಬೆಳೆದ ಬೆಳೆಗಳಿಗೆ ಯೋಗ್ಯ ಬೆಳೆ ವಿಮಾ ಪಾವತಿಸುವಲ್ಲಿ ಸಾಕಷ್ಟು ಅನುಕೂಲವಾಗಲಿದೆ ಎಂದು ಸಂಸದರು ಪ್ರಸ್ತಾಪಿಸಿ ಮನವಿ ನೀಡಿದರು.

ಅದರಂತೆ ಬೆಳಗಾವಿ ಜಿಲ್ಲೆ ಒಂದು ದೊಡ್ಡ ಜಿಲ್ಲೆ ಇಲ್ಲಿ ಹಲವಾರು ತಾಲೂಕುಗಳಲ್ಲಿ ಮತ್ತು ವಿಶೇಷವಾಗಿ ಬೆಳಗಾವಿ ತಾಲೂಕಿನಲ್ಲಿ ಹಬುತರ ಗ್ರಾಮ ಪಂಚಾಯತಿಯು ಮಹತ್ಮಾ ಗಾಂಧಿ ಉದ್ಯೋಗ ಖಾತರಿ ಭರವಸೆ ಯೋಜನೆಯಡಿ ಪ್ರಸ್ತಾಪಿದ ಹೆಚ್ಚುವರಿ ಕ್ರೀಯಾ ಯೋಜನೆಸಹ ಜಿಲ್ಲಾ ಪಂಚಾಯತಿಗೆ ಸಲ್ಲಿಸಿ ಅನುಮತಿ ಪಡೆದಿದ್ದರು ಸಹ ಅಧಿಕಾರಿಗಳು ಸಮಯಕ್ಕನುಗುಣವಾಗಿ ಅನುಷ್ಠಾನಗೊಳಿಸುವಲ್ಲಿ ವಿಫಲರಾಗಿದ್ದು, ಇದರಿಂದಾಗಿ ಮಹತ್ಮಾ ಗಾಂಧಿ ಉದ್ಯೋಗ ಖಾತರಿ ಭರವಸೆ ಯೋಜನೆಯಡಿ ತಯಾರಿಸಿದ ಕ್ರೀಯಾ ಯೋಜನೆ ಮತ್ತು ಇದರಲ್ಲಿ ಬರುವ ಹಲವು ಅಭಿವೃದ್ಧಿ ಕಾಮಗಾರಿಗಳು ಅನುಷ್ಠಾನ ಹಂತದಲ್ಲಿ ವಿಫಲತೆ ಕಂಡಿದ್ದು, ಇದರಿಂದಾಗಿ ರೈತರು ತೊಂದರೆ ಅನುಭವಿಸುವಂತಾಗಿದೆ. 

Home add -Advt

ಆದ್ದರಿಂದ ಪ್ರಸ್ತಾಪಿತ ಎರಡು ವಿಷಯಗಳಿಗೆ ಸಂಬಂಧಿಸಿದಂತೆ ಕೃಷಿ ಮತ್ತು ಗ್ರಾಮೀಣಾಭಿವೃದ್ದಿ ಸಚಿವರು ಕೂಡಲೆ ಅಗತ್ಯ ಕ್ರಮವನ್ನು ಜರುಗಿಸಲು ಸಂಸದರು ಕೋರಿದರು. 

ವಿಷಯವನ್ನು ಅವಲೋಕಿಸಿ, ಪ್ರಸ್ತಾಪಿತ ಎರಡೂ ವಿಷಯಗಳಿಗೆ ಸಂಬಂಧಿಸಿದಂತೆ ಕೂಡಲೆ ಶೀಘ್ರ ಕ್ರಮವನ್ನು ಜರುಗಿಸುವ ಬಗ್ಗೆ ಸ್ಪಷ್ಟ ಭರವಸೆಯನ್ನು ಕೇಂದ್ರ ಕೃಷಿ ಮತ್ತು ಗ್ರಾಮೀಣ ಅಭಿವ್ರದ್ದಿ ಸಚಿವರು ಶಿವರಾಜ ಸಿಂಗ್ ಚೌವ್ಹಾಣ್ ನೀಡಿದ್ದಾರೆಂದು ಬೆಳಗಾವಿ ಲೋಕಸಭಾ ಸದಸ್ಯರಾದ ಶ್ರೀ ಜಗದೀಶ ಶೆಟ್ಟರ್ ಇವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

Back to top button