CrimeKannada NewsKarnataka NewsLatest

*ಟಿಪ್ಪರ್-ಬೈಕ್ ಭೀಕರ ಅಪಘಾತ: ನಾಲ್ವರು ಯುವಕರು ಸ್ಥಳದಲ್ಲೇ ದುರ್ಮರಣ*

ಪ್ರಗತಿವಾಹಿನಿ ಸುದ್ದಿ: ಟಿಪ್ಪರ್ ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ನಾಲ್ವರು ಯುವಕರು ಸಾವನ್ನಪ್ಪಿರುವ ಘಟನೆ ನಡೆದಿದೆ.

ಚಿಕ್ಕಬಳ್ಳಾಪುರದ ಅಜ್ಜವಾರ ಗೇಟ್ ಬಳಿ ಈ ದುರಂತ ಸಂಭವಿಸಿದ್ದು, ಒಂದೇ ಗ್ರಾಮದ ನಾವರು ಯುವಕರು ಸಾವನ್ನಪ್ಪಿದ್ದಾರೆ. ನರಸಿಂಹಮೂರ್ತಿ, ನಂದೀಶ್, ಅರುಣ್, ಮನೋಜ್ ಮೃತ ದುರ್ದೈವಿಗಳು.

ಚಿಕ್ಕಬಳ್ಳಾಪುರದ ಚರ್ಚ್ ಗೆ ಭೇಟಿ ನೀಡಿ ವಾಪಾಸ್ ಆಗುತ್ತಿದ್ದಾಗ ಒಂದೇ ಬೈಕ್ ನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಟಿಪ್ಪರ್ ಲಾರಿಗೆ ಬೈಕ್ ಡಿಕ್ಕಿಯಾಗಿ ಸ್ಥಳದಲ್ಲೇ ನಾಲ್ವರು ಸಾವನ್ನಪ್ಪಿದ್ದಾರೆ. ಮೃತ ನರಸಿಂಹಮೂರ್ತಿ ಆರು ತಿಂಗಳ ಹಿಂದಷ್ಟೆ ವಿವಾಹವಾಗಿದ್ದ. ಪತಿಯನ್ನು ಕಳೆದೊಂಡಿರುವ ನವವಿವಾಹಿತೆ ಆಕ್ರಂದನ ಮುಗಿಲುಮುಟ್ಟಿದೆ.

ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button