Latest

ಸುಷ್ಮಿತಾ ಡೇಟಿಂಗ್; ಭಾಗ- 1 ರಹಸ್ಯ ತೆರೆದಿಟ್ಟ ಮಹೇಶ ಭಟ್

ಪ್ರಗತಿವಾಹಿನಿ ಸುದ್ದಿ, ಮುಂಬೈ: ಬಾಲಿವುಡ್ ನಟಿ ಸುಷ್ಮಿತಾ ಸೇನ್ ಹಾಗೂ ಲಲಿತ್ ಮೋದಿ ಡೇಟಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಷ್ಮಿತಾ ಬೆಂಬಲಕ್ಕೆ ನಿಂತ ನಿರ್ಮಾಪಕ ಮಹೇಶ ಭಟ್ ಹೊಸ ಬಾಂಬ್ ಒಂದನ್ನು ಸಿಡಿಸಿದ್ದಾರೆ.

ಸುಷ್ಮಿತಾ ಮಾಜಿ ಸಂಗಾತಿ ವಿಕ್ರಂ ಭಟ್ ಜೊತೆ ಸ್ನೇಹ ಬೆಳೆಸಿದ್ದು ಹೇಗೆ? ಎಂಬ ರಹಸ್ಯವನ್ನು ಮಹೇಶ ತೆರೆದಿಟ್ಟಿದ್ದಾರೆ. ‘ದಸ್ತಕ್’ ಚಿತ್ರ ತಯಾರಿಸುತ್ತಿದ್ದ ವೇಳೆ ಸುಷ್ಮಿತಾ ಅವರು ವಿಕ್ರಂ ಅವರೊಂದಿಗೆ ರೋಮಾನ್ಸ್ ಆರಂಭಿಸಿದ್ದರು ಎಂದಿದ್ದಾರೆ.

“ನನ್ನ ಬಲಗೈಯಂತಿದ್ದ ವಿಕ್ರಂ ಭಟ್ ನನ್ನ ಬಹುತೇಕ ಕೆಲಸಗಳನ್ನು ಪೂರೈಸುತ್ತಿದ್ದರು. ಆ ಸಂದರ್ಭದಲ್ಲಿ ಅವರು ಸುಷ್ಮಿತಾ ಜೊತೆ ಗಾಢವಾದ ಸಂಪರ್ಕ ಹೊಂದಿದ್ದರು” ಎಂದು ಮಹೇಶ ಭಟ್ ಹೇಳಿದ್ದಾರೆ.

ಸುಷ್ಮಿತಾ ಒಬ್ಬ ಅಸಾಮಾನ್ಯ ಯುವತಿ. ಆಕೆ ತಮ್ಮ ಸಾಮರ್ಥ್ಯದಿಂದ ಹೇಗೆ ಬೇಕೋ ಹಾಗೆ ಜೀವನ ಮಾಡಿದ್ದಾರೆ. ತಮ್ಮದೇ ನಿರ್ಧಾರದ ಮೇಲೆ ಬದುಕುವ ದಿಟ್ಟತನ ಅವರಲ್ಲಿದೆ. 21ನೇ ಶತಮಾನದ ಎರಡನೇ ದಶಕದಲ್ಲಿರುವ ನಾವು ವ್ಯಕ್ತಿಗೆ ತನ್ನಿಷ್ಟದಂತೆ ಬದುಕುವ ಸ್ವಾತಂತ್ರ್ಯ ನೀಡುವುದು ಅವಶ್ಯಕ ಎಂದು ಮಹೇಶ ಭಟ್ ಪ್ರತಿಪಾದಿಸಿದ್ದಾರೆ.

Home add -Advt

ಇಂದು ಸೋನಿಯಾ ವಿಚಾರಣೆ: ದೇಶಾದ್ಯಂತ ಕಾಂಗ್ರೆಸ್ ಪ್ರತಿಭಟನೆ; ನಾಳೆ ಬೆಳಗಾವಿಯಲ್ಲಿ ಪ್ರತಿಭಟನೆ

Related Articles

Back to top button