Belagavi NewsBelgaum News

*ಜೈನ್ ಹೆರಿಟೇಜ್ ಸ್ಕೂಲ್‌ನಲ್ಲಿ ಬುಕ್ ಫೇರ್ ಪುಸ್ತಕ ಮೇಳ*

ಪ್ರಗತಿವಾಹಿನಿ ಸುದ್ದಿ: ಮಕ್ಕಳಲ್ಲಿ ವೈವಿದ್ಯಮಯ ಪುಸ್ತಕಗಳ ಓದುವ ಅಭಿರುಚಿ ಮೂಡಿಸಿ ಜ್ಞಾನ ವೃದ್ಧಿಗೆ ಅನುಕೂಲತೆ ದೃಷ್ಟಿಯಿಂದ ಕೇಂದ್ರ ಸರ್ಕಾರದ ಸಂಸ್ಕೃತಿ ಇಲಾಖೆ ಮತ್ತು ಬ್ಲಾಸಮ್ಸ್ ಪುಸ್ತಕ ಕಂಪನಿಯ ಸಹಯೋಗದಲ್ಲಿ ಇದೇ ದಿನಾಂಕ ೧೭ ಮತ್ತು ೧೮ರಂದು ಎರಡು ದಿನಗಳವರೆಗೆ ಜೈನ ಶಿಕ್ಷಣ ಸಮೂಹ ಸಂಸ್ಥೆ (ಜೆಜಿಐ)ಯ ಜೈನ ಹೆರಿಟೇಜ್ ಸ್ಕೂಲ್‌ನಲ್ಲಿ ಬುಕ್ ಫೇರ್ ಪುಸ್ತಕ ಮೇಳವನ್ನು ಆಯೋಜಿಸಲಾಗಿತ್ತು.

ಜೈನ ಹರಿಟೇಜ್ ಸ್ಕೂಲ್ ನಿರ್ದೇಶಕರಾದ ಶ್ರದ್ಧಾ ಖಟಾವಟೆ, ಸ್ಕೂಲ್‌ನ ಪ್ರಾಂಶುಪಾಲರಾದ ರೋಹಿಣಿ ಕೆ.ಬಿ. ಬುಕ್ ಫೇರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಂಸ್ಥೆಯ ಆಡಳಿತಾಧಿಕಾರಿ ಅಮೀ ದೋಷಿ ಸೇರಿದಂತೆ ಸಿಬ್ಬಂದಿ ಮತ್ತು ಮಕ್ಕಳ ಪಾಲ್ಗೊಂಡಿದ್ದರು. ಮೇಳದಲ್ಲಿ ಕಾದಂಬರಿ, ವೈಚಾರಿಕ ಕೃತಿಗಳು ಸೇರಿದಂತೆ ಮಕ್ಕಳ ಶೈಕ್ಷಣಿಕ ಗುಣಮಟ್ಟ ಹಾಗೂ ಬೌದ್ಧಿಕ ವೃದ್ಧಿಗೆ ಪೂರಕವಾದ ಹಲಾವರು ಪುಸ್ತಕಗಳ ಪ್ರದರ್ಶನ ಓದುವ ಕ್ರಮದ ಬಗ್ಗೆ ಅರಿವು ಮೂಡಿಸಲಾಯಿತು. ಎರಡು ದಿನಗಳ ಈ ಮೇಳದಲ್ಲಿ ಸುಮಾರು ಹದಿನೈದು ನೂರಕ್ಕೂ ಅಧಿಕ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು, ಪೋಷಕರು ಮತ್ತು ಸಮುದಾಯದ ಸದಸ್ಯರು ಭೆಟ್ಟಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಶ್ರದ್ಧಾ ಖಟಾವಟೆ ಅವರು, ಮಕ್ಕಳಲ್ಲಿ ಓದುವ ಪ್ರವೃತ್ತಿ ಉತ್ತೇಜಿಸಲು ಹಾಗೂ ಅವರ ಬೌದ್ಧಿಕ ಮಟ್ಟದ ಉನ್ನತೀಕರಿಸಲು ಬುಕ್ ಫೇರ್ ಉತ್ತಮ ಪರಿಣಾಮ ಬೀರಲಿದೆ ಎಂದು ತಿಳಿಸಿದರು.

ಪ್ರಾಂಶುಪಾಲರಾದ ಕೆ.ಬಿ. ಅವರು, ಮಕ್ಕಳ ಶೈಕ್ಷಣಿಕ ಶ್ರೇಯೋಭಿವೃದ್ಧಿ ಜೈನ್ ಹೆರಿಟೇಜ್ ಸ್ಕೂಲ್ ವಿಶೇಷ ಆದ್ಯತೆ ನೀಡುತ್ತಿದೆ ಎಂದು ತಿಳಿಸಿದರು. ಆಡಳಿತಾಧಿಕಾರಿ ಅಮೀ ದೋಷಿ ಅವರು, ಪುಸ್ತಕ ಮೇಳ ಮಕ್ಕಳ ಓದುವ ಹವ್ಯಾಸ ಬೆಳೆಸುವಲ್ಲಿ ಗುರುತರ ಪಾತ್ರ ವಹಿಸಲಿದೆ ಎಂದರು.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button