Belagavi NewsBelgaum NewsKannada NewsKarnataka NewsLatest
*ನಂದಿಪರ್ವತ ಆಶ್ರಮದ ಜೈನ ಮುನಿ ಮೃತದೇಹ ಪತ್ತೆ*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಕೊಲೆಯಾಗಿದ್ದ ನಂದಿಪರ್ವತ ಆಶ್ರಮದ ಜೈನ ಮುನಿ ಕಾಮಕುಮಾರ ನಂದಿ ಮಹಾರಾಜರ ಮೃತದೇಹ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನಲ್ಲಿ ಪತ್ತೆಯಾಗಿದೆ.
ರಾಯಭಾಗ ತಾಲುಕಿನ ಖಟಕಬಾವಿ ಗದ್ದೆಯಲ್ಲಿರುವ ಕೊಳವೆ ಬಾಯಿಯಲ್ಲಿ ಜೈನಮುನಿಯ ಮೃತದೇಹ ಪತ್ತೆಯಾಗಿದೆ. ಜೈನಮುನಿಯ ಮೃತದೇಹವನ್ನು ಹಂತಕರು ಕತ್ತರಿಸಿ ಮೂಟೆಕಟ್ಟಿ ಕೊಳವೆಬಾವಿಗೆ ಎಸೆದಿದ್ದು, ಇದೀಗ ಮೃತದೇಹದ ಭಾಗಗಳಿರುವ ಮೂಟೆ ಪತ್ತೆಯಾಗಿದೆ.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಹಿರೆಕೋಡಿ ಗ್ರಾಮದ ನಂದಿಪರ್ವತ ಆಶ್ರಮದ ಜೈನಮುನಿ ಕಾಮಕುಮಾರ ನಂದಿ ಮಹಾರಾಜರನ್ನು ಕೊಲೆಗೈದು ಮೃತದೇಹವನ್ನು ಖಟಕಬಾವಿ ಗದ್ದೆಯಲ್ಲಿ ಹಂತಕರು ಬಿಸಾಕಿದ್ದರು ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಖಟಕಬಾವಿ ಗದ್ದೆ ಹಾಗೂ ಅಲ್ಲಿನ ಕೊಳಬೆ ಬಾಯಿಯಲ್ಲಿ ಪೊಲೀಸರು ಶೋಧ ನಡೆಸಿದ್ದರು.




