Latest

ಉಗ್ರರ ಭಾರೀ ಸಂಚು ವಿಫಲಗೊಳಿಸಿದ ಸೇನೆ

ಪ್ರಗತಿವಾಹಿನಿ ಸುದ್ದಿ; ಶ್ರೀನಗರ: ಜಮ್ಮು-ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಭದ್ರತಾ ಸಿಬ್ಬಂದಿ ಮತ್ತು ಪೊಲೀಸರು ಉಗ್ರರ ಸಂಚನ್ನು ವಿಫಲಗೊಳಿದ್ದಾರೆ. ಕಾಶ್ಮೀರ ಪೊಲೀಸರು ಮತ್ತು ಸೇನೆ ನಡೆಸಿದ ಜಂಟಿ ಕಾರ್ಯಚರಣೆಯಲ್ಲಿ 4 ಗ್ರೆನೆಡ್ ಲಾಂಚರ್, 3 ಚೀನಿ ಗ್ರೆನೆಡ್, ಎಕೆ-47 ಮತ್ತು ಒಂದು ಬಾಂಬ್ ವಶ ಪಡಿಸಿಕೊಂಡಿದ್ದಾರೆ.

ಪೂಂಛ್ ಜಿಲ್ಲೆಯ ಲೊರ್ನಾ ಇಲಾಖೆಯಲ್ಲಿ ಉಗ್ರರು ಬಚ್ಚಿಟ್ಟಿದ್ದ 8 ಕೆಜಿ ತೂಕದ ಎರಡು ಐಇಡಿ ಮತ್ತು ಎರಡು ಹ್ಯಾಂಡ್ ಗ್ರೆನೆಡ್ ಗಳನ್ನು ನಿಷ್ಕ್ರಿಯಗೊಳಿಸಿದ್ದಾರೆ.

ಜಮ್ಮು-ಕಾಶ್ಮೀರದಲ್ಲಿ ಸೇನೆ ಉಗ್ರರ ವಿರುದ್ಧ ನಿರಂತರ ಕಾರ್ಯಚರಣೆ ನಡೆಸುತ್ತಿದೆ. ಈ ಕಾರ್ಯಚರಣೆಯಲ್ಲಿ 138 ಉಗ್ರರನ್ನು ಸೇನೆ ಹೊಡೆದುರುಳಿಸಿದೆ. ರನ್ಬೀರಗಢದ ಕೆಲ ಮನೆಯಲ್ಲಿ ಉಗ್ರರು ಅಡಗಿಕೊಂಡಿದ್ದು, ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿರುವ ಮಾಹಿತಿ ಸೇನೆಗೆ ಲಭ್ಯವಾಗಿತ್ತು.

ಈ ಮಾಹಿತಿ ಆಧಾರದ ಮೇಲೆ ಸಿಆರ್‍ಪಿಎಫ್ ಮತ್ತು ಪೊಲೀಸರ ತಂಡ ಜಂಟಿ ಕಾರ್ಯಚರಣೆಗೆ ಇಳಿದಿತ್ತು. ರನ್ಬೀರಗಢದಲ್ಲಿಯ ಪ್ರತಿ ಮನೆಯನ್ನು ಅಧಿಕಾರಿಗಳು ಪರಿಶೀಲನೆ ನಡೆಸಿದರು. ಈ ವೇಳೆ ಒಂದು ಮನೆಯಲ್ಲಿ ಅಡಗಿದ್ದ ಉಗ್ರರ ತಂಡ ಸೇನೆಯ ಮೇಲೆ ಗುಂಡಿನ ದಾಳಿ ನಡೆಸಿದೆ. ಸೇನೆ ಕೂಡ ಪ್ರತಿದಾಳಿ ನಡೆಸಿದ್ದು, ಅಂತಿಮವಾಗಿ ಕಾರ್ಯಾಚರಣೆಯಲ್ಲಿ 4 ಗ್ರೆನೆಡ್ ಲಾಂಚರ್, 3 ಚೀನಿ ಗ್ರೆನೆಡ್, ಎಕೆ-47 ಮತ್ತು ಒಂದು ಬಾಂಬ್ ವಶ ಪಡಿಸಿಕೊಂಡಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button