Belagavi NewsBelgaum News

*ಜಮುನಾ ಪಟ್ಟಣ ಅವರಿಗೆ ಕರ್ನಾಟಕ ಪ್ರೈಡ್ ಬಿಸಿನೆಸ್ ಅವಾರ್ಡ್*

ಪ್ರಗತಿವಾಹಿನಿ ಸುದ್ದಿ: ಬೆಂಗಳೂರಿನ ಶೇರಟನ್ ಗ್ರ್ಯಾಂಡ್ ಹೋಟೆಲ್ ನಲ್ಲಿ ಭಾರತದ ಉದ್ಯಮಿ ದಿ. ರತನ್ ಟಾಟಾ ಅವರ ಸ್ಮರಣಾರ್ಥವಾಗಿ ರಾಜ್ ನ್ಯೂಸ್ ಕನ್ನಡ ಹಾಗೂ ರಾಜ್ ಮ್ಯೂಸಿಕ್ ಕನ್ನಡ ಇವರ ಸಹಭಾಗಿತ್ವದಲ್ಲಿ ಕರ್ನಾಟಕ ಪ್ರೈಡ್ ಬಿಸಿನೆಸ್ ಅವಾರ್ಡ್-2024 ಅನ್ನು ನೀಡಲಾಯಿತು.

ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ಹೆಸರಾಂತ ಉದ್ಯಮಿಗಳಾದ ಪ್ರದೀಪಕುಮಾರ ಪಟ್ಟಣ ಅವರ ಧರ್ಮಪತ್ನಿ ಜಮುನಾ. ಪಿ. ಪಟ್ಟಣ ಅವರಿಗೆ ಕರ್ನಾಟಕ ಪ್ರೈಡ್ ಬಿಸಿನೆಸ್ ಅವಾರ್ಡ್ – 2024ನ್ನು ಸಭೆಯ ಮುಖ್ಯ ಅಥಿತಿಗಳಾದ ಹಾಗೂ ವಿಧಾನಸಭೆಯ ಅಧ್ಯಕ್ಷರಾದ ಯು.ಟಿ. ಖಾದರ್ ಇವರು ಪ್ರಶಸ್ತಿ ನೀಡಿ ಗೌರವಿಸಿದರು. 

ವಿಧಾನಸಭೆ ಮುಖ್ಯ ಸಚೇತಕರಾದ ಅಶೋಕ ಮಹದೇವಪ್ಪ ಪಟ್ಟಣ, ರಾಜ್ ನ್ಯೂಸ್ ಕನ್ನಡ ಹಾಗೂ ರಾಜ್ ಮ್ಯೂಸಿಕ್ ಕನ್ನಡ ವಾಹಿನಿಯವರು ಹಾಗೂ ಇತರೇ ಗಣ್ಯರು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಉಪಸ್ಥಿತರಿದ್ದರು.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button