Kannada NewsLatest

ಹಣ್ಣಿನ ವ್ಯಾಪಾರಿ ಮಹಿಳೆಗೆ ಆಸಿಡ್

ಪ್ರಗತಿವಾಹಿನಿ ಸುದ್ದಿ,  ರಾಯಬಾಗ: ಪಟ್ಟಣದಲ್ಲಿ ಹಣ್ಣಿನ ವ್ಯಾಪಾರ ಮಾಡುತ್ತಿದ್ದ ಮಹಿಳೆಯ ಮೇಲೆ ಆಸಿಡ್ ದಾಳಿ ನಡೆದಿದೆ

ಶುಕ್ರವಾರ ಸಾಯಂಕಾಲ 7 ಗಂಟೆ ಸುಮಾರಿಗೆ ಪಟ್ಟಣದ ಮುಖ್ಯರಸ್ತೆಯ ಬಳಿ ಬಾಳೆಹಣ್ಣಿನ ವ್ಯಾಪಾರ ಮಾಡುತ್ತಿದ್ದ ಮಹಿಳೆಯ ಮುಖಕ್ಕೆ ಆಸಿಡ್ ಎರಚಿರುವ ಘಟನೆ ನಡೆದಿದೆ.

Home add -Advt

ಮಹಿಳೆಯ ಚೀರಾಟವನ್ನು ಕಂಡ ಜನರು ಆಕೆಯನ್ನು ತಕ್ಷಣಕ್ಕೆ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದರು. ಸುದ್ದಿ ತಿಳಿದ ಕೂಡಲೇ ಆಸ್ಪತ್ರೆಗೆ ಧಾವಿಸಿದ ಪೊಲೀಸ್ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ಆರೋಪಿಯ ಬಂಧನಕ್ಕೆ ಕ್ರಮ ಕೈಗೊಂಡಿದ್ದಾರೆ.

ಘಟನೆ ನಡೆದ ಸ್ವಲ್ಪ ಸಮಯದ ನಂತರ ಪೋಲಿಸ ಠಾಣೆಗೆ ಸ್ವಯಂ ಪ್ರೇರಿತನಾಗಿ ಆರೋಪಿ ಹಾಜರಾಗಿದ್ದಾನೆ.

ತಾನು ವಿಷ ಕುಡಿದಿರುವುದಾಗಿ ಪೊಲೀಸರ ಮುಂದೆ ಹೇಳಿಕೆ ನೀಡಿದ ಬೆನ್ನಲ್ಲೇ ಪೊಲೀಸರು ಸಾರ್ವಜನಿಕ ಆಸ್ಪತ್ರೆಗೆ ಆರೋಪಿಯನ್ನು ದಾಖಲಿಸಿದ್ದಾರೆ.

ನಂತರ ಹೆಚ್ಚಿನ ಚಿಕಿತ್ಸೆಗೆಂದು ಆತನನ್ನು ಜಿಲ್ಲಾ ಸಾರ್ವಜನಿಕ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆಸ್ಪತ್ರೆಯ ಮುಂದೆ ಜಮಾಯಿಸಿದ ಜನರನ್ನು ಪೊಲೀಸರು ಚದುರಿಸಿದರು.

ಸ್ಥಳದಲ್ಲಿ ಡಿವೈಎಸ್ಪಿ ಬೀಡುಬಿಟ್ಟಿದ್ದು ಹೆಚ್ಚಿನ ತನಿಖೆಯನ್ನು ಕೈಗೊಂಡಿದ್ದಾರೆ. ಮಹಿಳೆಗೆ ಚಿಕಿತ್ಸೆ ನೀಡಿದ ಮುಖ್ಯ ವೈದ್ಯಾಧಿಕಾರಿ ಡಾ ರಮೇಶ ರಂಗಣ್ಣವರ್, ಮಹಿಳೆಯ ಹೆಚ್ಚಿನ ಭಾಗ ಗಾಯವಾಗಿದೆ. ಚಿಕಿತ್ಸೆಗೆಂದು ಜಿಲ್ಲಾ ಸಾರ್ವಜನಿಕ ಆಸ್ಪತ್ರೆಗೆ ವರ್ಗಾಯಿಸಲಾಗಿದೆ ಎಂದು ಮಾಹಿತಿ ನೀಡಿದರು

ಘಟನೆಯ ಕುರಿತಂತೆ ರಾಯಬಾಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಎಸ್ಪಿ ಲಕ್ಷಣ ನಿಂಬರಗಿ ತಿಳಿಸಿದ್ದಾರೆ.

Related Articles

Back to top button