Kannada NewsKarnataka NewsLatest

*ಜ. 22 : ಟೈಪಿಂಗ್-ಶೀಘ್ರಲಿಪಿ ಪರೀಕ್ಷೆ ಆರಂಭ*

ಪ್ರಗತಿವಾಹಿನಿ ಸುದ್ದಿ, ಧಾರವಾಡ : ಶಾಲಾ ಶಿಕ್ಷಣ ಇಲಾಖೆಯ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ನಡೆಸುವ ಬೆರಳಚ್ಚು(ಟೈಪಿಂಗ್) ಹಾಗೂ ಶೀಘ್ರಲಿಪಿ(ಶಾರ್ಟಹ್ಯಾಂಡ್) ಪರೀಕ್ಷೆಗಳು ಜ. 22ರಂದು (ಸೋಮವಾರ) ಆರಂಭಗೊಳ್ಳಲಿದ್ದು, ಜ. 31 ರವರೆಗೆ ನಡೆಯಲಿವೆ.

ಕನ್ನಡ ಮತ್ತು ಆಂಗ್ಲ ಬಾಷೆಯ ಬೆರಳಚ್ಚು ಮತ್ತು ಶೀಘ್ರಲಿಪಿ ಪರೀಕ್ಷೆಗಳನ್ನು ವ್ಯವಸ್ಥಿತವಾಗಿ ಜರುಗಿಸಲು ಸೂಚನೆ ನೀಡಿ, ವಿಸ್ತೃತ ವೇಳಾಪಟ್ಟಿಯನ್ನು ಅಧಿಕೃತಗೊಳಿಸಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ ನಿರ್ದೇಶಕ ಎಚ್.ಎನ್. ಗೋಪಾಲಕೃಷ್ಣ ಆದೇಶ ಹೊರಡಿಸಿದ್ದಾರೆ.

ಅಭ್ಯರ್ಥಿಗಳು ಧಾರವಾಡ ಜಿಲ್ಲೆಯ ವ್ಯಾಪ್ತಿಯ ಕನ್ನಡ ಮತ್ತು ಆಂಗ್ಲ ಬಾಷೆಯ ಬೆರಳಚ್ಚು ಮತ್ತು ಶೀಘ್ರಲಿಪಿ ಪರೀಕ್ಷೆಗಳ ಸಮಗ್ರ ಮಾಹಿತಿಗಾಗಿ ಮೊಬೈಲ್ ಸಂಖ್ಯೆ : 9972952929 ಗೆ ಸಂಪರ್ಕಿಸುವಂತೆ ಇಲ್ಲವೇ ನಗರದ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್) ಅಥವಾ ಅನ್ನಪೂರ್ಣ ಇನ್‌ಸ್ಟಿಟ್ಯೂಟ್ ಆಫ್ ಕಾಮರ್ಸ, ನವನಗರ ಹುಬ್ಬಳ್ಳಿ ಇಲ್ಲಿ ಖುದ್ದಾಗಿ ಭೇಟಿ ನೀಡಬಹುದು.

ಜ.26 ಪ್ರಜಾರಾಜ್ಯೋತ್ಸವ, ಜ. 27 ನಾಲ್ಕನೇ ಶನಿವಾರ ಹಾಗೂ ಜ. 28 ರವಿವಾರ ರಜೆ ಇರುವುದರಿಂದ ಈ ಮೂರೂ ದಿನ ಪರೀಕ್ಷೆಗಳು ನಡೆಯುವುದಿಲ್ಲವೆಂದು ಜಿಲ್ಲಾ ಬೆರಳಚ್ಚು ಮತ್ತು ಶೀಘ್ರಲಿಪಿ ಸಂಸ್ಥೆಗಳ ಸಂಘದ ಅಧ್ಯಕ್ಷ ಅನಿಲ ಉಳ್ಳಾಗಡ್ಡಿ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button