Latest

ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಜನಾರ್ಧನ ರೆಡ್ಡಿ ಪುತ್ರ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜಕೀಯಕ್ಕೂ ಸಿನಿರಂಗಕ್ಕೂ ಅವಿನಾಭಾವ ಸಂಬಂಧ. ಹಲವು ರಾಜಕಾರಣಿಗಳ ಮಕ್ಕಳು ನಾಯಕ ನಟರಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಡುವುದನ್ನು ಗಮನಿಸಿದ್ದೇವೆ. ಇದೀಗ ಮಾಜಿ ಸಚಿವ ಜನಾರ್ಧನ ರೆಡ್ಡಿ ಪುತ್ರ ಚಿತ್ರರಂಗಕ್ಕೆ ಅದ್ದೂರಿಯಾಗಿ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ.

ಜನಾರ್ಧನ ರೆಡ್ದಿ ಪುತ್ರ ಕಿರೀಟಿ ರೆಡ್ಡಿ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ಮಹಾಶಿವರಾತ್ರಿಯಂದೇ ಕಿರೀಟಿ ರೆಡ್ಡಿ ಸಿನಿಮಾ ಬಗ್ಗೆ ಘೋಷಣೆಯಾಗಿದೆ.

Home add -Advt

ಟಾಲಿವುಡ್ ನ ವಾರಾಹಿ ಫಿಲ್ಮ್ ಪ್ರೊಡಕ್ಷನ್ ಸಂಸ್ಥೆಯಡಿ ರಾಧಾ ಕೃಷ್ಣ ನಿರ್ದೇಶನದಲ್ಲಿ ತೆಲುಗು ಹಾಗೂ ಕನ್ನಡ ಭಾಷೆಗಳಲ್ಲಿ ಸಿನಿಮಾ ಮೂಡಿ ಬರಲಿದೆ. ಸಿನಿಮಾಗೆ ಟೈಟಲ್ ಅಂತಿಮಗೊಂಡಿಲ್ಲ. ಲವ್ ಹಾಗೂ ಫ್ಯಾಮಿಲಿ ಎಂಟರ್ ಟೈನ್ ಮೆಂಟ್ ಕಥಾಹಂದರವುಳ್ಳ ಬೃಹತ್ ತಾರಾಬಳಗಗಳನ್ನೊಳಗೊಂಡ ಚಿತ್ರ ಇದಾಗಿದ್ದು, ಮಾರ್ಚ್ 4ರಂದು ಚಿತ್ರ ಅದ್ದೂರಿ ಲಾಂಚ್ ಆಗಲಿದೆ.
ದುನಿಯಾ ವಿಜಯ್ ನಿರ್ದೇಶನದ ಹೊಸ ಚಿತ್ರಕ್ಕೆ ಟೈಟಲ್ ಫಿಕ್ಸ್

Related Articles

Back to top button