*ಜನಿವಾರ ಧರಿಸಿದ್ದಕ್ಕೆ ವಿದ್ಯಾರ್ಥಿಗಳಿಗೆ ಬಸ್ಕಿ ಹೊಡೆಸಿ ಶಿಕ್ಷೆ: ಶಿಕ್ಷಕ ವಜಾ*

ಪ್ರಗತಿವಾಹಿನಿ ಸುದ್ದಿ: ವಿದ್ಯಾರ್ಥಿಗಳು ಜನಿವಾರ ಧರಿಸಿದ್ದಕ್ಕೆ, ಕೈಗೆ ದಾರ ಕಟ್ಟಿಕೊಂಡಿದ್ದಕ್ಕೆ ಬಸ್ಕಿ ಹೊಡೆಸಿ ಹಿಂಸಿಸುತ್ತಿದ್ದ ದೈಹಿಕ ಶಿಕ್ಷಕನನ್ನು ವಜಾಗೊಳಿಸಿರುವ ಘಟನೆ ಉಡುಪಿ ಜಿಲ್ಲೆಯ ಮೊರರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಡೆದಿದೆ.
ಮದನ್ ಮಕಂದಾರ್ ಸೇವೆಯಿಂದ ವಜಾಗೊಂಡ ದೈಹಿಕ ಶಿಕ್ಷಕ. ಕಲಬುರಗಿ ಮೂಲದ ಮದನ್ ಮಕಂದಾರ್ ಮೊರಾರ್ಜಿ ದೇಶಾಯಿ ಶಾಲೆಯಲ್ಲಿ ಅತಿಥಿ ದೈಹಿಕ ಶಿಕ್ಷಕನಾಗಿದ್ದ. ಜನಿವಾರ ಧರಿಸಿದ್ದ ವಿದ್ಯಾರ್ಥಿಗಳಿಗೆ, ಕೈಗೆ ದಾರಕಟ್ಟಿಕೊಂಡಿದ್ದ ವಿದ್ಯಾರ್ಥಿಗಳಿಗೆ ಪ್ರಶ್ನೆ ಮಾಡಿ, ನಿರಂತರವಾಗಿ ಬಸ್ಕಿ ಹೊಡೆಸಿ ಶಿಕ್ಷಿಸುತ್ತಿದ್ದ. ನೊಂದ ವಿದ್ಯಾರ್ಥಿಗಳು ಪ್ರಾಂಶುಪಾಲರಿಗೆ ಹಗೂ ಪೋಷಕರಿಗೆ ದೂರು ನೀಡಿದ್ದರು.
ಹಲವು ಬಾರಿ ಪ್ರಾಂಶುಪಾಲರು ಶಿಕ್ಷಕನಿಗೆ ಎಚ್ಚರಿಕೆ ನೀಡಿದ್ದರು. ಆದಾಗ್ಯೂ ವಿದ್ಯಾರ್ಥಿಗಳಿಗೆ ಮತ್ತದೇ ಶಿಕ್ಷೆಯನ್ನು ಮುಂದುವರೆಸಿದ್ದ. ಪೋಷಕರು, ಗ್ರಾಮಸ್ಥರು ಶಿಕ್ಷಕನನ್ನು ತರಾಟೆಗೆ ತೆಗೆದುಕೊಂಡಿದ್ದರು. ಈ ಬೆಳವಣಿಗೆ ಬೆನ್ನಲ್ಲೇ ಪ್ರಾಂಶುಪಾಲರು ಶಿಕ್ಷಕನನ್ನು ಸೇವೆಯಿಂದ ವಜಾಗೊಳಿಸಿದ್ದಾರೆ.

