ಪ್ರಗತಿವಾಹಿನಿ ಸುದ್ದಿ, ಟೋಕಿಯೊ: ಜಪಾನ್‌ನ ಡಿಜಿಟಲ್ ಸಚಿವ ಟಾರೊ ಕೊನೊ ಅವರು ಫ್ಲಾಪಿ ಡಿಸ್ಕ್‌ಗಳು ಮತ್ತು ದೇಶದಲ್ಲಿ ಬಳಸಲಾದ ಇತರ ರೆಟ್ರೊ ತಂತ್ರಜ್ಞಾನದ ಮೇಲೆ ‘ಸಮರ’ವನ್ನೇ ಘೋಷಿಸಿದ್ದಾರೆ.
ಅವುಗಳನ್ನು ಹಂತಹಂತವಾಗಿ ತೆಗೆದುಹಾಕುವ ಪ್ರಯತ್ನಕ್ಕೆ ಅವರು ಕೈಹಾಕಿದ್ದಾರೆ. ಸುಮಾರು 1,900 ಸರಕಾರಿ ಕಾರ್ಯವಿಧಾನಗಳಲ್ಲಿ ಇನ್ನೂ ಫ್ಲಾಪಿ ಡಿಸ್ಕ್‌ಗಳು, ಸಿಡಿಗಳು ಮತ್ತು ಮಿನಿ-ಡಿಸ್ಕ್‌ಗಳನ್ನೇ ಬಳಕೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಅವರು ಈ ಕ್ರಮ ಕೈಗೊಂಡಿದ್ದಾರೆ.
ಇತ್ತೀಚಿನ ಸಮ್ಮೇಳನವೊಂದರಲ್ಲಿ ಭಾಗವಹಿಸಿದ್ದ ಅವರು “ಇಂದಿನ ಅತ್ಯಾಧುನಿಕ ತಂತ್ರಜ್ಞಾನದ ದಿನಗಳಲ್ಲಿ ಫ್ಲಾಪಿ ಡಿಸ್ಕ್ ಗಳನ್ನು ಬಳಸುವವರು ಯಾರು, ಖರೀದಿಸುವವರು ಯಾರು?” ಎಂದು ಅವರು ಪ್ರಶ್ನಿಸಿದ್ದಾರೆ.
ಈ ನಿಟ್ಟಿನಲ್ಲಿ ಅವರು ಹಳೆಯ ತಂತ್ರಜ್ಞಾನದ ಫ್ಲಾಪಿ ಡಿಸ್ಕ್‌ಗಳು, ಸಿಡಿಗಳು ಮತ್ತು ಮಿನಿ-ಡಿಸ್ಕ್‌ಗಳಿಗೆ ಗುಡ್ ಬೈ ಹೇಳಲು ಮುಂದಾಗಿದ್ದಾರೆ. ಈ ಕಾರ್ಯ ಹಂತಹಂತವಾಗಿ ನಡೆಯಲಿದೆ ಎಂದು ಅವರು ಹೇಳಿದ್ದಾರೆ.
ಮಳೆ ಅವಾಂತರಕ್ಕೆ ಬೆಂಗಳೂರಿನ ಐಟಿ, ಬ್ಯಾಂಕಿಂಗ್ ಸಂಸ್ಥೆಗಳು ಕಳೆದುಕೊಂಡಿದ್ದು ಎಷ್ಟು ಕೋಟಿ ಗೊತ್ತೇ?
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ