
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ -ಬೆಳಗಾವಿ ಮಹಾನಗರ ಮಹಿಳಾ ಕಾಂಗ್ರೆಸ್ ನಾಯಕಿ, ಮಾಜಿ ಪಾಲಿಕೆ ಸದಸ್ಯೆ ಜಯಶ್ರೀ ಮಾಳಗಿ ಪುತ್ರ ಅಶೋಕ ಕುಮಾರ ಮಾಳಗಿ ಮತ್ತು ಆತನ ಸಹಚರ ರವಿ ಸಾಕೆ ನಗರದ ಹೊಟೆಲ್ ಒಂದರಲ್ಲಿ ದಾಂಧಲೆ ನಡೆಸಿದ್ದಾರೆ.
3 ದಿನಗಳ ಹಿಂದೆ ನಡೆದ ಘಟನೆಯ ಸಿಸಿಟಿವಿ ದೃಷ್ಯಗಳು ಈಗ ವೈರಲ್ ಆಗಿವೆ. ಅಶೋಕ ಕುಮಾರ ಮತ್ತು ಸಂಗಡಿಗರು ಹೊಟೆಲ್ ಗೆ ಹೋಗಿದ್ದರು. ಆ ಸಂದಂರ್ಭದಲ್ಲಿ ಕ್ಷುಲ್ಲಕ ಕಾರಣಕ್ಕೆ ಸರ್ವರ್ ಮೇಲೆ ಎಗರಾಡುತ್ತಾರೆ. ಅಷ್ಟ ಅಲ್ಲದೆ ಆತನನ್ನು ಅಟ್ಟಾಡಿಸಿ ಹೊಡೆಯುತ್ತಾರೆ. ಅಲ್ಲಿದ್ದವರೆಲ್ಲ ತಪ್ಪಿಸಲು ಹೋದರೂ ಕೇಳದೆ ಬಡಿಯುತ್ತಾರೆ. ನಂತರ ಆತನ ಶರ್ಟ್ ಬಿಟ್ಟಿಸಿ ಕಾಲಿಗೆ ಬೀಳಿಸಿಕೊಳ್ಳುತ್ತಾರೆ.
ಇಷ್ಟೆಲ್ಲ ಆದ ನಂತರ ಎಪಿಎಂಸಿ ಪೊಲೀಸರು ಸ್ಥಳಕ್ಕೆ ಆಗಮಿಸುತ್ತಾರೆ. ಸಿಸಿ ಟಿವಿ ದೃಷ್ಯಗಳನ್ನೆಲ್ಲ ನೋಡಿ, ರೌಡಿ ವರ್ತನೆ ಮಾಡಿದವರನ್ನು ಠಾಣೆಗೆ ಕರೆಸುತ್ತಾರೆ. ಅವರಿಗೆ ಎಚ್ಚರಿಕೆ ನೀಡಿ, ಬುದ್ದಿ ಹೇಳಿ ಕಳಿಸುತ್ತಾರೆ.
ಇದೀಗ ವೀಡಿಯೋ ವೈರಲ್ ಆಗುತ್ತಿದ್ದಂತೆ ಪೊಲೀಸ್ ಆಯುಕ್ತ ಲೋಕೇಶ್ ಕುಮಾರ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದಾರೆ. ಸಂಬಂಧಿಸಿದ ಪೊಲೀಸ್ ಅಧಿಕಾರಿಗಳಿಂದ ವಿವರ ಪಡೆದಿದ್ದಲ್ಲದೆ, ಸೂಕ್ತ ಕ್ರಮಕ್ಕೆ ಆದೇಶಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗುವ ಸಾಧ್ಯತೆ ಇದೆ. ಜೊತೆಗೆ ತಕ್ಷಣ ಸೂಕ್ತ ಕ್ರಮ ತೆಗೆದುಕೊಳ್ಳದ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮವಾಗುವ ಸಾಧ್ಯತೆಯೂ ಇದೆ.
ಪ್ರಕರಣದ ಸಂಬಂಧ ಪ್ರತಿಕ್ರಿಯಿಸಿರುವ ಜಯಶ್ರೀ ಮಾಳಗಿ, ಇಷ್ಟೊಂದು ಗಂಭೀರವಾಗಿದೆ ಎಂದು ನನಗೆ ಗೊತ್ತಿರಲಿಲ್ಲ. ಅದೇ ದಿನ ನಾನು ವಿವರ ಕೇಳಿ, ಮಗಮಿಗೆ ಬುದ್ದಿ ಹೇಳಿದ್ದೇನೆ. ನನ್ನ ಹೆಸರು ಹಾಳು ಮಾಡುತ್ತಿದ್ದೀರಿ ಎಂದು ಬಯ್ದಿದ್ದೇನೆ ಎಂದಿದ್ದಾರೆ.
ವಿಪರ್ಯಾಸವೆಂದರೆ ಜಯಶ್ರೀ ಮಾಳಗಿ ಪತಿ ಮತ್ತು ಮಾವ ಇಬ್ಬರೂ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ