Latest

ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಕೋನರೆಡ್ದಿ ರಾಜೀನಾಮೆ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಸೋಲು ಹಿನ್ನೆಲೆಯಲ್ಲಿ ನೈತಿಕ ಹೊಣೆ ಹೊತ್ತು ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಎನ್.ಹೆಚ್.ಕೋನರೆಡ್ಡಿ ರಾಜೀನಾಮೆ ನೀಡಿದ್ದಾರೆ.

ಹುಬ್ಬಳ್ಳಿ-ಧಾರವಾಡ ಪಾಲಿಕೆ ಚುನಾವಣೆಯಲ್ಲಿ 25ನೇ ವಾರ್ಡ್ ನ ಜೆಡಿಎಸ್ ಅಭರ್ಥಿ ಲಕ್ಷ್ಮಿ ಮಾರುತಿ ಹಿಂಡಸಗೇರಿ ಒಬ್ಬರು ಮಾತ್ರ ಗೆಲುವು ಸಾಧಿಸಿದ್ದರು. ನಿರೀಕ್ಷೆಗೆ ತಕ್ಕಂತೆ ಜೆಡಿಎಸ್ ಗೆಲುವು ಸಾಧಿಸಿಲ್ಲ. ತೀವ್ರ ಮುಖಭಂಗ ಅನುಭವಿಸಿರುವ ಹಿನ್ನೆಲೆಯಲ್ಲಿ ಕೋನರೆಡ್ಡಿ ರಾಜೀನಾಮೆ ನೀಡಿದ್ದಾರೆ.

ಪಾಲಿಕೆ ಚುನಾವಣೆಯಲ್ಲಿ ಪಕ್ಷದ ಅಧ್ಯಕ್ಷರು, ಪದಾಧಿಕಾರಿಗಳು, ಕಾರ್ಯಕರ್ತರು ಸಾಕಷ್ಟು ಪ್ರಚಾರ ಮಾಡಿ ಚುನಾವಣೆ ಎದಿರಿಸಿದ್ದೆವು. ಆದರೆ ಓರ್ವ ಅಭ್ಯರ್ಥಿ ಬಿಟ್ಟು ಯಾರೊಬ್ಬರೂ ಗೆಲುವು ಸಾಧಿಸಿಲ್ಲ, ಇದು ಮನಸ್ಸಿಗೆ ನೋವು ತಂದಿದೆ. ಈ ಹಿನ್ನೆಲೆಯಲ್ಲಿ ನೈತಿಕ ಹೊಣೆಹೊತ್ತು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಕೋನರೆಡ್ಡಿ ತಿಳಿಸಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಅತ್ಯಾಚರ ಯತ್ನ ಪ್ರಕರಣ; ಬಿಜೆಪಿ ಮುಖಂಡನಿಗೆ 2 ವರ್ಷ ಜೈಲುಶಿಕ್ಷೆ

Home add -Advt

Related Articles

Back to top button