Latest

ಜೆಇಇ ಮುಖ್ಯ ಪರೀಕ್ಷೆ ದಿನಾಂಕ ಮುಂದೂಡಿಕೆ

ಪ್ರಗತಿವಾಹಿನಿ ಸುದ್ದಿ; ನವದೆಹಲಿ: ದ್ವಿತೀಯ ಪಿಯುಸಿ ಬೋರ್ಡ್ ಪರೀಕ್ಷೆ ಹಾಗೂ ಜೆಇಇ ಮುಖ್ಯ ಪರೀಕ್ಷೆ ಒಂದೇ ದಿನ ಬಂದಿದ್ದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಒತ್ತಡಕ್ಕೆ ಮಣಿದ ಎನ್ ಟಿಎ ಜೆಇಇ ಮುಖ್ಯ ಪರೀಕ್ಷಾ ದಿನಾಂಕವನ್ನು ಮುಂದೂಡಿದೆ.

ಈ ಹಿಂದೆ, ಜೆಇಇ ಮೇನ್ 2022ರ ಮೊದಲ ಸೆಷನ್ ಪರೀಕ್ಷೆಯನ್ನು ಏಪ್ರಿಲ್ 16, 17, 18, 19, 20, 21ರಂದು ನಡೆಸುವುದಾಗಿ ಘೋಷಿಸಲಾಗಿತ್ತು. ಆದರೆ ಅದೇ ದಿನಾಂಕದಂದು ಈ ಹಿಂದೆಯೇ ಬೋರ್ಡ್ ಪರೀಕ್ಷೆಗಳು ನಿಗದಿಯಾಗಿದ್ದವು. ಇದರಿಂದ ಸಂಕಷ್ಟಕ್ಕೆ ಸಿಲುಕಿದ ವಿದ್ಯಾರ್ಥಿಗಳು ಜೆಇಇ ಮುಖ್ಯ ಪರೀಕ್ಷೆ ದಿನಾಂಕ ಬದಲಿಸುವಂತೆ ಪಟ್ಟು ಹಿಡಿದಿದ್ದರು. ಈ ಹಿನ್ನೆಲೆಯಲ್ಲಿ ಇದೀಗ ದಿನಾಂಕ ಬದಲಿಸಲಾಗಿದ್ದು, ಹೊಸ ವೇಳಾಪಟ್ಟಿ ಪ್ರಕಟಗೊಂಡಿದೆ.

ಜೆಇಇ ಮುಖ್ಯ ಸೆಷನ್ -1 ರ ಪರೀಕ್ಷೆ ಏಪ್ರಿಲ್ 21, 24, 25 ಹಾಗೂ ಏಪ್ರಿಲ್ 29ರಂದು ಮತ್ತು ಮೇ 1 ಹಾಗೂ ಮೇ 4ರಂದು ನಡೆಯಲಿದೆ ಎಂದು ಎನ್ ಟಿಎ ತಿಳಿಸಿದೆ.
ಸಚಿವರು, ಶಾಸಕರಿಗೆ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ವೀಕ್ಷಣಗೆ ವಿಶೇಷ ವ್ಯವಸ್ಥೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button