ಪ್ರಗತಿವಾಹಿನಿ ಸುದ್ದಿ: ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಪಾಸಾದವರು ಸರ್ಕಾರಿ ಉದ್ಯೋಗಕ್ಕೆ ಸದಾವಕಾಶವಿದೆ. ನೈರುತ್ಯ ರೈಲ್ವೆ ಇಲಾಖೆಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತ ಅಭ್ಯರ್ಥಿಗಳು ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಹುದ್ದೆಗಳ ವಿವರ
ಇಲಾಖೆ ಹೆಸರು : ನೈಋತ್ಯ ರೈಲ್ವೆ, ಹುಬ್ಬಳ್ಳಿ.
ಹುದ್ದೆಗಳ ಸಂಖ್ಯೆ : 46.
ಉದ್ಯೋಗ ಸ್ಥಳ : ಹುಬ್ಬಳ್ಳಿ/ಬೆಂಗಳೂರು/ಮೈಸೂರು
ವೇತನ ಶ್ರೇಣಿ : ತಿಂಗಳಿಗೆ 5,200- 20,200/- ರೂ.
ಅರ್ಹತೆಗಳು:
ಅಭ್ಯರ್ಥಿಯು 01 ಜನವರಿ 2025 ಕ್ಕೆ ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 25 ಮೀರಿರಬಾರದು.
ಅಭ್ಯರ್ಥಿಯು 10ನೇ, 12ನೇ, B.Sc ಯನ್ನು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ ಪದವಿ ಪೂರ್ಣಗೊಳಿಸಿರಬೇಕು.
ಅರ್ಜಿ ಸಲ್ಲಿಸಲು ಆಭಿಕ ದಿನಾಂಕ : ಅಕ್ಟೋಬರ್ 19, 2024. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ನವೆಂಬರ್ 19, 2024.
ಕ್ರೀಡಾ ಪ್ರಯೋಗಗಳು, ಶಿಕ್ಷಣ ಅರ್ಹತೆ, ದೈಹಿಕ ಸಾಮರ್ಥ್ಯ ಪರೀಕ್ಷೆ, ಡಾಕ್ಯುಮೆಂಟ್ ಪರಿಶೀಲನೆ, ವೈದ್ಯಕೀಯ ಪರೀಕ್ಷೆ ಮೂಲಕ ಆಯ್ಕೆ ನಡೆಯಲಿದೆ
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯ ಮೂಲಕ ಆಫ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು. swr.indianrailways.gov.in ಈ ಅಧಿಕೃತ ವೆಬ್ಸೈಟ್ ನಲ್ಲಿ ಅರ್ಜಿ ನಮೂನೆಗಳನ್ನು ಡೌನ್ಲೋಡ್ ಮಾಡಿಕೊಳ್ಳಿ. ಅರ್ಜಿಯೊಂದಿಗೆ ಐಡಿ ಪುರಾವೆ, ಶೈಕ್ಷಣಿಕ ಅಂಕ ಪಟ್ಟಿ, ಇತ್ತೀಚಿನ ಭಾವಚಿತ್ರ, ರೆಸ್ಯೂಮ್, ಯಾವುದೇ ಕೆಲಸ ಅನುಭವವಿದ್ದರೆ ಇತ್ಯಾದಿ ದಾಖಲೆಗಳನ್ನು ವಿವರಿಸಬೇಕು
ಅರ್ಜಿದಾರರು ಅರ್ಜಿ ನಮೂನೆಯನ್ನು ಸಂಬಂಧಿತ ಸ್ವಯಂ-ದೃಢೀಕರಿಸಿದ ದಾಖಲೆಗಳೊಂದಿಗೆ 19 ನವೆಂಬರ್-2024 ರಂದು ಅಥವಾ ಅದಕ್ಕೂ ಮೊದಲೇ
ವಿಳಾಸ:
ವಲಯ ರೈಲ್ವೇ/ಹೆಡ್ ಕ್ವಾರ್ಟರ್ಸ್ ಕೋಟಾ ವಿರುದ್ಧ ಕ್ರೀಡಾ ಕೋಟಾ : ಸಹಾಯಕ ಸಿಬ್ಬಂದಿ ಅಧಿಕಾರಿ/ಹೆಚ್ಕ್ಯು., ನೈಋತ್ಯ ರೈಲ್ವೆ ಹೆಚ್ಕ್ಯು ಕಚೇರಿ, ಸಿಬ್ಬಂದಿ ಇಲಾಖೆ, ರೈಲು ಸೌಧ, ಗದಗ ರಸ್ತೆ, ಹುಬ್ಬಳ್ಳಿ-580020.
ಬೆಂಗಳೂರು ವಿಭಾಗದ ಕೋಟಾ ವಿರುದ್ಧ ಕ್ರೀಡಾ ಕೋಟಾ : ಹಿರಿಯ ವಿಭಾಗೀಯ ಸಿಬ್ಬಂದಿ ಅಧಿಕಾರಿ, DRM ಕಚೇರಿ ಸಂಕೀರ್ಣ, ನೈಋತ್ಯ ರೈಲ್ವೆ, ಬೆಂಗಳೂರು-560023.
ಹುಬ್ಬಳ್ಳಿ ವಿಭಾಗದ ಕೋಟಾ ವಿರುದ್ಧ ಕ್ರೀಡಾ ಕೋಟಾ : ಹಿರಿಯ ವಿಭಾಗೀಯ ಸಿಬ್ಬಂದಿ ಅಧಿಕಾರಿ, DRM ಕಚೇರಿ ಕಾಂಪೌಂಡ್, ನೈಋತ್ಯ ರೈಲ್ವೆ, ಹುಬ್ಬಳ್ಳಿ-560020.
ಮೈಸೂರು ವಿಭಾಗದ ಕೋಟಾ ವಿರುದ್ಧ ಕ್ರೀಡಾ ಕೋಟಾ : ಹಿರಿಯ ವಿಭಾಗೀಯ ಸಿಬ್ಬಂದಿ ಅಧಿಕಾರಿ, ನೈಋತ್ಯ ರೈಲ್ವೆ, ಇರ್ವಿನ್ ರಸ್ತೆ, ಮೈಸೂರು-570001. ಈ ವಿಳಾಸಕ್ಕೆ ಕಳುಹಿಸಬಹುದು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ