Latest

ನಕಲಿ ಆದೇಶ ಪತ್ರ ನೀಡಿ 70 ಲಕ್ಷ ವಂಚನೆ; ಐವರು ಅರೆಸ್ಟ್

ಪ್ರಗತಿವಾಹಿನಿ ಸುದ್ದಿ; ಚಿತ್ರದುರ್ಗ: ಸರ್ಕಾರಿ ನೌಕರಿ ಕೊಡಿಸುವುದಾಗಿ ಹೇಳಿ ನಕಲಿ ಆದೇಶ ಪತ್ರ ಕೊಟ್ಟು 70 ಲಕ್ಷ ರೂಪಾಯಿ ಲಪಟಾಯಿಸಿ 500ಕ್ಕೂ ಹೆಚ್ಚು ಜನರಿಗೆ ವಂಚಿಸಿರುವ ಘಟನೆ ಚಿತ್ರದುರ್ಗದಲ್ಲಿ ಬೆಳಕಿಗೆ ಬಂದಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು ಪೊಲೀಸರು ಬಂಧಿಸಿದ್ದಾರೆ. 2019ನೇ ಸಾಲಿನ ಸಾರಿಗೆ ಇಲಾಖೆಯ ಸಂಚಾರಿ ನಿರೀಕ್ಷಕ ಮತ್ತು ಸಹಾಯಕ ಸಂಚಾರಿ ಹುದ್ದೆ ಹೆಸರಿನಲ್ಲಿ ನಕಲಿ ಆದೇಶ ಪತ್ರವನ್ನು ನೀಡಿ 500ಕ್ಕೂ ಹೆಚ್ಚು ಜನರಿಗೆ ಖದೀಮರು ವಂಚಿಸಿದ್ದಾರೆ. ಆದೇಶ ಪತ್ರ ಹಿಡಿದು ಕಚೇರಿಗೆ ಬಂದಾಗಲೇ ಉದ್ಯೋಗಾಕಾಂಕ್ಷಿಗಳಿಗೆ ತಾವು ಮೋಸ ಹೋಗಿರುವುದು ಗೊತ್ತಾಗಿದೆ.

ಹೀಗೆ ವಂಚನೆಗೊಳಗಾಗಿದ್ದ ಹೊಸದುರ್ಗದ ಅಭಿಷೇಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ಭೇದಿಸಿದ ಪೊಲೀಸರು ಆರೋಪಿಗಳಾದ ಬಾಗಲಕೋಟೆಯ ಮಹಮ್ಮದ್ ಸಾಬ್, ವಿಜಯಪುರದ ಬಸವರಾಜ್, ವೀರಭದ್ರಪ್ಪ, ಮಂಜುನಾಥ್, ಬೆಂಗಳೂರಿನ ಅನೀಲ್ ಎಂಬುವವರನ್ನು ಬಂಧಿಸಿದ್ದಾರೆ.

ಬಂಧಿತರಿಂದ 12 ಲಕ್ಷದ 40 ಸಾವಿರ ರೂಪಾಯಿ ನಗದು ಹಣ, ಕಾರು ವಶಕ್ಕೆ ಪಡೆಯಲಾಗಿದೆ.

ಬಕೆಟ್ ನೀರಿಗೆ ಬಿದ್ದು ಮಗು ದಾರುಣ ಸಾವು; ಅಥಣಿಯಲ್ಲಿ ಹೃದಯವಿದ್ರಾವಕ ಘಟನೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button