

ಜೋಡೆತ್ತು ಗಾಡಿಯ ಶರ್ಯತ್ತಿನಲ್ಲಿ ೫ ಲಕ್ಷ ರೂ. ಬಹುಮಾನ ಪಡೆದ ಬಾಳು ಹಜಾರೆ ಅವರ ಜೋಡೆತ್ತು
ಪ್ರಗತಿವಾಹಿನಿ ಸುದ್ದಿ,
ನಿಪ್ಪಾಣಿ: ತಾಲೂಕಿನ ಬೆನಾಡಿ ಗ್ರಾಮದಲ್ಲಿ ಜೊಲ್ಲೆ ಗ್ರುಪ್‌ವು ಭಾನುವಾರ ಆಯೋಜಿಸಿದ ಜನರಲ್ ಜೋಡೆತ್ತಿನ ಶರ್ಯತ್ತಿನ ಅ ವಿಭಾಗದಲ್ಲಿ ಶಿರೂರ್‌ನ ಬಾಳು ಹಜಾರೆ ಇವರ ಜೋಡೆತ್ತು ಪ್ರಥಮ ಸ್ಥಾನ ಪಡೆದವು. ಬಾಳು ಹಜಾರೆ ಅವರಿಗೆ ೫ ಲಕ್ಷ ರೂ. ಹಾಗೂ ಟ್ರಾಫಿ ನೀಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಸನ್ಮಾನಿಸಿದರು.
ಕೊಲ್ಹಾಪೂರದ ಸಂದೀಪ ಪಾಟೀಲ ಇವರ ಜೋಡೆತ್ತುಗಳು ದ್ವಿತೀಯ ಪಡೆದು ರೂ.೩ ಲಕ್ಷ ಹಾಗೂ ಉಮೇಶ ಜಾಧವ ಇವರ ಜೋಡೆತ್ತುಗಳು ತೃತೀಯ ಸ್ಥಾನ ಪಡೆದು ರೂ.೨ ಲಕ್ಷ ಬಹುಮಾನ ತಮ್ಮ ಮಾಲೀಕರಿಗೆ ಗಿಟ್ಟಿಸಿಕೊಟ್ಟವು.
ಜನರಲ್ ಜೋಡೆತ್ತು ಶರ್ಯತ್ತಿನ ಬ ವಿಭಾಗದಲ್ಲಿ ದಾನೋಳಿಯ ಬಂಡಾ ಖಿಲಾರೆ ಇವರ ಜೋಡೆತ್ತುಗಳು ಪ್ರಥಮ ಸ್ಥಾನ ಪಡೆದವು. ಸಾಂಗಲಿಯ ಸಂತೋಷ ಗಿರಾಂಡೆ ಮತ್ತು ರಾವಸಾಹೇಬ ಮೇಟಕರಿ ತೃತೀಯ ಸ್ಥಾನ ಪಡೆದವು. ಮೂವರಿಗೂ ಅನುಕ್ರಮವಾಗಿ ೨ ಲಕ್ಷ ರೂ., ೧ ಲಕ್ಷ ರೂ. ಮತ್ತು ೫೦ ಸಾವಿರ ರೂ. ಬಹುಮಾನ ವಿತರಿಸಲಾಯಿತು.
ಒಂದು ಕುದುರೆ ಒಂದು ಎತ್ತಿನ ಗಾಡಿ ಶರ್ಯತ್ತಿನ ಮೊದಲ ಗುಂಪಿನಲ್ಲಿ ಕವಲಾಪುರದ ಅತುಲ ಪಾಟೀಲ ಪ್ರಥಮ, ಫಳಶಿಯ ಉಮೇಶ ಫಳಶಿ ದ್ವಿತೀಯ, ವಡಣಗೆಯ ರಾಜವೀರ ಕನಸೆ, ಎರಡನೇಯ ಗುಂಪಿನಲ್ಲಿ ದಾನೋಳೀಯ ಬಂಡಾ ಖಿಲಾರೆ ಪ್ರಥಮ, ಉಮರಾಣಿಯ ರಾಜು ಉಮರಾಣಿ ದ್ವಿತೀಯ, ಚಿಂಚಣಿಯ ರಾಹುಲ ಜಾಧವ ತೃತೀಯ ಸ್ಥಾನ ಪಡೆದರು.
ಇದರೊಂದಿಗೆ ಒಂದು ನೌತರ ಮತ್ತು ಒಂದು ಜನರಲ್ ಕುದುರೆ ಗಾಡಿ, ನೌತರ ಹಲ್ಲಿಲ್ಲದ ಹೋರಿ ಗಾಡಿ ಶರ್ಯತ್ತುಗಳೂ ಸಹ ಜರುಗಿದವು. ವಿಜೇತರಿಗೆ ನಗದು ಬಹುಮಾನವನ್ನು ಗಣ್ಯರು ವಿತರಿಸಿದರು.
ಆರಂಭದಲ್ಲಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ಸ್ಥಳೀಯ ಶ್ರೀ ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಮಲಗೊಂಡಾ ಪಾಟೀಲ, ಉಪಾಧ್ಯಕ್ಷ ಪವನ ಪಾಟೀಲ ಶರ್ಯತ್ತಿನ ಮೈದಾನಕ್ಕೆ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿ ಸಂಸದ ಜೊಲ್ಲೆ ಕ್ಷೇತ್ರದ ಅಭಿವೃಧ್ಧಿಯೊಂದಿಗೆ ನಾವು ಜೊಲ್ಲೆ ಗ್ರುಪ್ ಅಡಿಯಲ್ಲಿ ಕ್ರೀಡೆ, ಸಾಂಸ್ಕೃತಿಕ, ಧಾರ್ಮಿಕ, ಮೊದಲಾದ ವಿವಿಧ ಕ್ಷೇತ್ರಗಳ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತ ಬಂದಿದ್ದೇವೆ. ಈ ಮೂಲಕ ನಾಗರಿಕರಿಂದ ನಮಗೆ ಅಪಾರ ಬೆಂಬಲ ಸಿಗುತ್ತಿದ್ದು ಭವಿಷ್ಯದಲ್ಲಿ ಅದನ್ನು ಮುಂದುವರೆಸುತ್ತ ಹೋಗಲಾಗುವುದು. ಅಭಿವೃಧ್ಧಿಯೊಂದಿಗೆ ಸಾರ್ವಜನಿಕರಿಗೆ ಮನೋರಂಜನೆ ಮಾಡುವ ಹಾಗೂ ಅವರಲ್ಲಿ ಅಡಗಿರುವ ಪ್ರತಿಭೆಗಳನ್ನು ಹೊರಸೂಸುವ ಕಾರ್ಯಗಳನ್ನು ಮಾಡಿ ಪ್ರತಿಭಾನ್ವಿತರಿಗೆ ವೇದಿಕೆಯನ್ನೂ ಸಹ ಕಲ್ಪಿಸಿ ಕೊಡಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ನಗರಸಭೆ ಮಾಜಿ ಉಪಾಧ್ಯಕ್ಷ ಸುನೀಲ ಪಾಟೀಲ, ಕಾರ್ಖಾನೆಯ ಸಂಚಾಲಕ ಮಹಾಲಿಂಗ ಕೋಠಿವಾಲೆ, ರಾಜು ಗುಂದೇಶಾ, ಮಲಗೊಂಡಾ ಪಾಟೀಲ, ಪ್ರಕಾಶ ಶಿಂಧೆ, ವಿನಾಯಕ ಪಾಟೀಲ, ರಮೇಶ ಪಾಟೀಲ(ಖೇಮಣ್ಣಾ), ಬಾಳಾಸಾಹೇಬ ಕದಮ, ಸುಹಾಸ ಗೂಗೆ, ರಾವಸಾಹೇಬ ಫರಾಳೆ, ಸಿದ್ದು ನರಾಟೆ, ಕಲ್ಲಪ್ಪಾ ಜನವಾಡೆ, ಮೊದಲಾದವರು ಸೇರಿದಂತೆ ಅಪಾರ ಜನಸ್ತೋಮ ನೆರೆದಿತ್ತು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ