Kannada NewsLatestUncategorized
ಕೋಟೆ ಸ್ಪರ್ಧೆಯಲ್ಲಿ 300 ವಿದ್ಯಾರ್ಥಿಗಳ ಸಾಧನೆ; ಸ್ವಾವಲಂಭಿ ಜೀವನಕ್ಕೆ ಯುವಕ-ಯುವತಿಯರಿಗೆ ಉದ್ಯೋಗ ಭರವಸೆ: ಸಚಿವೆ ಶಶಿಕಲಾ ಜೊಲ್ಲೆ
![](https://pragativahini.com/wp-content/uploads/2022/11/Jolle2.jpg)
ಪ್ರಗತಿವಾಹಿನಿ ಸುದ್ದಿ; ಚಿಕ್ಕೋಡಿ: ಐತಿಹಾಸಿಕ ಶಿವಾಜಿ ಮಾಹಾರಾಜರ ಜೀವನಾದರ್ಶ ಅಭಿಮಾನ ಯುವಕರಲ್ಲಿ ಬೆಳೆಸುವ ನಿಟ್ಟಿನಲ್ಲಿ ಜೊಲ್ಲೆ ಗ್ರೂಪ್ ದಿಂದ ಕೋಟೆ ಮಹೋತ್ಸವ ಸ್ಪರ್ಧೆ ಏರ್ಪಡಿಸಿ ಯುವಕರಲ್ಲಿ ಸಂಸ್ಕಾರ ಬಿತ್ತುವ ಕಾರ್ಯ ಮಾಡಲಾಗುತ್ತದೆ ಎಂದು ಮುಜರಾಯಿ ಹಜ್ ಮತ್ತು ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.
![](https://pragati.taskdun.com/wp-content/uploads/2022/11/Jolle1-300x162.jpg)
ವಿದ್ಯಾರ್ಥಿ ಮಾಡಿದ ಸಾಧನೆಯಿಂದ ಶಿಕ್ಷರ ಅಭಿಮಾನ ಹೆಚ್ಚುತ್ತದೆ. ಆ ನಿಟ್ಟಿನಲ್ಲಿ ಭಾರತದಲ್ಲಿ ಗುರುವಿನ ಸ್ಥಾನ ಉನ್ನತ ಶಿಕರದತ್ತ ಹೋಗುತ್ತದೆ. ರಾಜಕಾರಣಕ್ಕೆ ಬರುವ ಮೊದಲು ಜೊಲ್ಲೆ ಉದ್ಯೋಗ ಸಮೂಹದ ಮೂಲಕ ಸಾಮಾಜಿಕ ಕಾರ್ಯ ಮಾಡುತ್ತಾ ಬಂದಿದ್ದು, ಇಂದಿಗೂ ರಾಜಕಾರಣದ ಜೊತೆಗೆ ನಮ್ಮ ಸಂಸ್ಥೆಯಿಂದ ಕಾರ್ಯ ಮಾಡಲಾಗುತ್ತಿದೆ ಎಂದರು.
ಇಂದಿನ ಆಧುನಿಕ ಯುಗದಲ್ಲಿ ಸಂಸ್ಕಾರ ಅತ್ಯವಶ್ಯಕ ಆ ನಿಟ್ಟಿನಲ್ಲಿ ಜೊಲ್ಲೆ ಉದ್ಯೋಗ ಸಮೂಹ ಸಂಸ್ಕಾರ ಸಂಸ್ಕೃತಿ ಬೆಳೆಸುವ ನಿಟ್ಟಿನಲ್ಲಿ ಗ್ರಾಮೀಣ ಭಾಗದಲ್ಲಿ ಮಾಡುವದರೊಂದಿಗೆ ರಾಜ್ಯ ಮಾತ್ರವಲ್ಲದೆ ನೆರೆಯ ಮಹಾರಾಷ್ಟ್ರದಲ್ಲಿ ಕಾರ್ಯಕ್ರಮ ಮಾಡಲಾಗುವದು.
ಪ್ರತಿಯಾಗಿ ನಿಪ್ಪಾಣಿಯಲ್ಲಿ ಸುಮಾರು 300 ಜನ ಕೋಟೆ ಸ್ಪರ್ಧೆಯಲ್ಲಿ ಪಾಲ್ಗೊಂಡು ಸಾಧನೆ ಮೆರೆದಿದ್ದಾರೆ. ಸ್ಪರ್ಧೆಯಲ್ಲಿ ವಿಜೇತರಿಗೆ ನಮ್ಮ ಸಂಸ್ಥೆಯ ಪ್ರೋತ್ಸಾಹ ನಿರಂತರವಾಗಿರಲಿದ್ದು, ಯುವಕ ಯುವತಿಯರಿಗೆ ಸ್ವಾವಲಂಬಿ ಜೀವನಕ್ಕೆ ಉದ್ಯೋಗ ಕಲ್ಪಿಸುವ ಕಾರ್ಯ ಮಾಡಲಾಗುವದು ಎಂದರು.
ಸರಕಾರದ ಯೋಜನೆಗಳನ್ನು ನಿಪ್ಪಾಣಿ ಕ್ಷೇತ್ರದ ಜನರಿಗೆ ಮುಟ್ಟಿಸುವ ಕಾರ್ಯವನ್ನು ಪ್ರಾಮಾಣಿಕವಾಗಿ ಮಾಡಲಾಗಿದೆ. ಪ್ರಸಕ್ತ ಗಂಗಾ ಕಲ್ಯಾಣ ಯೋಜನೆಯಡಿ 25 ಫಲಾನುಭವಿಗಳಿಗೆ ಸರಕಾರದ ಸಾಮಗ್ರಿ ವಿತರಿಸಲಾಗಿದೆ. ಅಂಗವಿಕಲ ಫಲಾನುಭವಿಗಳಿಗೆ ಟ್ರೈಸಿಕಲ್ ವಿತರಣೆ ಮಾಡಲಾಗಿದೆ. ಕಾರ್ಮಿಕರಿಗೆ ಬಸ್ ಪಾಸ ವಿತರಿಸಲಾಗಿದೆ ಎಂದರು.
ಸಂಜಯ ಘೋಡಾವತ್ ಶಾಲೆಯ ಪ್ರಾಚಾರ್ಯ ಸುಸ್ಮೀತಾ ಮೋಹಂತಿ ಮಾತನಾಡಿದರು. ವೇದಿಕೆ ಮೇಲೆ ವಿಜಯಪೂರ ಬಸವಲಿಂಗ ಸ್ವಾಮೀಜಿ. ಹಂಚನಾಳ ಮಹಿಶಾನಂದ ಸ್ವಾಮೀಜಿ. ಸಮಾಧಿಮಟಡದ ಪ್ರಾಣಲಿಂಗ ಸ್ವಾಮೀಜಿ. ಇಷ್ಡಲಿಂಗ ಸ್ವಾಮೀಜಿ.ಸಂಸದ ಅಣ್ಣಾಸಾಹೇಬ ಜೊಲ್ಲೆ. ನಗರಸಭೆ ಅಧ್ಯಕ್ಷ ಜಯವಂತ ಬಾಟಲೆ. ಉಪಾಧ್ಯಕ್ಷೆ ನೀತಾ ಬಾಗಡೆ.ನಗರಸಭೆ ಸಭಾಪತಿ ರಾಜು ಗುಂದೆ. ಜ್ಯೋತಿಪ್ರಸಾದ ಜೊಲ್ಲೆ. ಪ್ರೀಯಾ ಜೊಲ್ಲೆ. ಪ್ರಣವ ಮಾನ್ವಿ. ಪವನ ಪಾಟೀಲ. ಪ್ರಸಾದ ಔಧಾಕರ. ರಾಜು ಭದ್ರಗಡೆ ಮುಂತಾದವರು ಇದ್ದರು.
ಬಸವಜ್ಯೋತಿ ಯುಥ್ ಪೌಂಡೇಶನ್ ಅಧ್ಯಕ್ಷ ಬಸವಪ್ರಸಾದ ಜೊಲ್ಲೆ ಸ್ವಾಗತಿಸಿದರು. ವಿಜಯ ರಾಹುತ ಮತ್ತು ರಮೇಶ ಪಾಟೀಲ ನಿರೂಪಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ