ಡಾ.ಪ್ರಭಾಕರ ಕೋರೆಯವರ ಮಯೂರ ಚಿತ್ರಮಂದಿರಕ್ಕೆ ಶುಭ ಹಾರೈಸಿದ ಜೊಲ್ಲೆ ದಂಪತಿ
ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ: ಮಾಜಿ ರಾಜ್ಯಸಭಾ ಸದಸ್ಯರು,ಕೆಎಲ್‌ಇ ಕಾರ‍್ಯಾಧ್ಯಕ್ಷರಾದ ಪ್ರಭಾಕರ ಕೋರೆ ಅವರ ಮಾಲೀಕತ್ವದ ಅಂಕಲಿಯ ಮಯೂರ ಚಿತ್ರಮಂದಿರವು ಯಶಸ್ವಿ ಪಥದಲ್ಲಿ ಮುನ್ನಡೆಯಲಿ ಎಂದು ಮಾಜಿ ಸಚಿವೆ, ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ ಹಾರೈಸಿದರು.
ಅವರು ಗುರುವಾರ ತಾಲೂಕಿನ ಅಂಕಲಿ ಗ್ರಾಮದಲ್ಲಿ, ಪ್ರಭಾಕರ ಕೋರೆ ಅವರ ಮಾಲೀಕತ್ವದ ಮಯೂರ ಚಿತ್ರಮಂದಿರದ ೪೮ ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿ, ಇಂದಿನ ಹೊಸ ತಂತ್ರಜ್ಞಾನದಲ್ಲಿ ಮೊಬೈಲ್‌ನಲ್ಲಿಯೇ ಚಲನಚಿತ್ರಗಳನ್ನು ನೋಡುವ ಸಂದರ್ಭ ಇದ್ದರು ಸಹ ಪರದೆಯ ಮೇಲೆ ನೋಡುವುದೇ ಒಂದು ತರಹದ ಖುಷಿ. ಈ ಹಿನ್ನೆಲೆಯಲ್ಲಿ ಚಿತ್ರಮಂದಿರಗಳಿಗೂ ಸಹ ಆಧುನಿಕ ಸ್ಪರ್ಶ ನೀಡಿರುವುದು ವಿಶೇಷ ಎಂದರು.
ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಹಾಗೂ ಶಾಸಕಿ ಶಶಿಕಲಾ ಜೊಲ್ಲೆ ಅವರು ಮಾಜಿ ರಾಜ್ಯಸಭಾ ಸದಸ್ಯರು, ಕೆಎಲ್‌ಇ ಕಾರ‍್ಯಾಧ್ಯಕ್ಷರಾದ ಪ್ರಭಾಕರ ಕೋರೆ ಅವರನ್ನು ಸನ್ಮಾನಿಸಿ, ಗೌರವಿಸಿ ಉಭಯ ಕುಷಲೋಪರಿ ಹಂಚಿಕೊಂಡರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ