ಪ್ರಗತಿ ವಾಹಿನಿ ಸುದ್ದಿ, ಶಿಮ್ಲಾ: ಹಿಮಾಚಲ ಪ್ರದೇಶದಲ್ಲಿ ಬುಧವಾರ ನಡೆಯಲಿರುವ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ರಮದ ವರದಿ ಮಾಡುವ ಪತ್ರಕರ್ತರಿಗೆ ಚಾರಿತ್ರ್ಯ ಪ್ರಮಾಣ ಪತ್ರ ನೀಡುವಂತೆ ಹಿಮಾಚಲ ಸರಕಾರ ಕೇಳಿದೆ.
ಮೋದಿ ಕಾರ್ಯಕ್ರಮದ ವರದಿಗೆ ಬರುವ ಎಲ್ಲ ಖಾಸಗಿ ಪ್ರಿಂಟ್ ಮತ್ತು ಟಿವಿ ವಾಹಿನಿಯ ಪತ್ರಕರ್ತರು, ಅಲ್ಲದೇ ದೂರದರ್ಶನ ಮತ್ತು ಆಲ್ ಇಂಡಿಯಾ ರೇಡಿಯೊ ವರದಿಗಾರರಿಗೂ ಈ ನಿಯಮ ಅನ್ವಯವಾಗಲಿದೆ.
ಕಾರ್ಯಕ್ರಮದ ನಿಮಿತ್ತ ಸೆಕ್ಯುರಿಟಿ ಪಾಸ್ ನೀಡಲಾಗುತ್ತಿದ್ದು, ಸೆಕ್ಯುರಿಟಿ ಪಾಸ್ ಪಡೆಯಲು ಚಾರಿತ್ರ್ಯ ಪ್ರಮಾಣ ಪತ್ರ ನೀಡುವುದು ಕಡ್ಡಾಯವಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ