Belagavi NewsBelgaum NewsKannada NewsKarnataka NewsPolitics

*ಪತ್ರಕರ್ತ ಮಹಾಂತೇಶ ಕುರಬೇಟಗೆ ಪಿತೃವಿಯೋಗ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಏಷ್ಯಾನೆಟ್ ಸುವರ್ಣ ನ್ಯೂಸ್ ದಾವಣಗೆರೆ ವರದಿಗಾರ ಮಹಾಂತೇಶ ಕುರಬೇಟ ಅವರ ತಂದೆ ದೇಮಣ್ಣ ಮಲ್ಲಪ್ಪ ಕುರಬೇಟ (72) ಮಂಗಳವಾರ  ಮಧ್ಯಾಹ್ನ ನಿಧನರಾದರು.

ಬೆಳಗಾವಿ ‌ಜಿಲ್ಲೆಯ ಸವದತ್ತಿ ‌ತಾಲೂಕಿನ ಮುರಗೋಡ ಗ್ರಾಮದ ಇವರು ಹಲವು ವರ್ಷಗಳಿಂದ ಬೆಳಗಾವಿಯ ರಾಮತೀರ್ಥ ನಗರದಲ್ಲಿ ನೆಲೆಸಿದ್ದರು. ಮೃತರು ರಾಜ್ಯ ಗುಪ್ತವಾರ್ತೆಯಲ್ಲಿ ಸುದೀರ್ಘ ಅವಧಿಗೆ ಸೇವೆ ಸಲ್ಲಿಸಿದ್ದಾರೆ. ಮೃತರ ಅಂತ್ಯಕ್ರಿಯೆ ‌ಮಂಗಳವಾರ ರಾತ್ರಿ 8 ಕ್ಕೆ ಬೆಳಗಾವಿಯ ಸದಾಶಿವ ನಗರದ ಸ್ಮಶಾನದಲ್ಲಿ ನೆರವೇರಲಿದೆ. ಅವರು ಪತ್ನಿ, ಇಬ್ಬರು ಪುತ್ರರು ಸೇರಿ ಅಪಾರ ಬಂಧುಗಳನ್ನು ಅಗಲಿದ್ದಾರೆ.

Home add -Advt

Related Articles

Back to top button