Kannada NewsKarnataka NewsLatest
ಯಡಿಯೂರಪ್ಪ ಕಾರ್ಯಕ್ರಮ ಮತ್ತೆ ಬದಲು

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕಾರ್ಯಕರ್ಮದಲ್ಲಿ ಮತ್ತೆ ಬದಲಾವಣೆಯಾಗಿದೆ. 2ನೇ ಪ್ರವಾಸ ಪಟ್ಟಿ ಪ್ರಕಾರ ಬೆಳಗಾವಿಯಲ್ಲಿ ವಾಸ್ತವ್ಯ ಮಾಡಬೇಕಿದ್ದ ಸಿಎಂ ಇಂದೇ ಬೆಂಗಳೂರಿಗೆ ವಾಪಸ್ಸಾಗಲಿದ್ದಾರೆ.
ಯಡಿಯೂರಪ್ಪ ಅವರ ಮೊದಲ ಪ್ರವಾಸ ಪಟ್ಟಿ ಪ್ರಕಾರ ಇಂದು ಸಂಜೆಯೇ ಬೆಳಗಾವಿಯಿಂದ ಬೆಂಗಳೂರಿಗೆ ವಾಪಸ್ಸಾಗಲಿದ್ದರು. ಆದರೆ ನಿನ್ನೆ ರಾತ್ರಿ ಪರಿಷ್ಕೃತ ಪ್ರವಾಸ ಪಟ್ಟಿ ಪ್ರಕಟಿಸಲಾಗಿದ್ದು ಅದರ ಪ್ರಕಾರ ಇಂದು ರಾತ್ರಿ ಬೆಳಗಾವಿಯಲ್ಲೇ ವಾಸ್ತವ್ಯ ಮಾಡಬೇಕಿತ್ತು.
ಆದರೆ ಇದೀಗ ಮತ್ತೆ ಬದಲಾವಣೆಯಾಗಿದ್ದು ಇಂದೇ ಅವರು ಬೆಂಗಳೂರಿಗೆ ವಾಪಸ್ಸಾಗುವರು.
ಸಧ್ಯ ಅವರು ಖಾಸಗಿ ಹೊಟೆಲ್ ನಲ್ಲಿ ಮರಾಠಾ ಸಮಾಜದ ಪ್ರಮುಖರ ಸಭೆಯಲ್ಲಿ ಪಾಲ್ಗೊಂಡಿದ್ದಾರೆ.
ಯಡಿಯೂರಪ್ಪ ಬೆಳಗಾವಿ ಕಾರ್ಯಕ್ರಮದಲ್ಲಿ ಬದಲಾವಣೆ




