
ಪ್ರಗತಿವಾಹಿನಿ ಸುದ್ದಿ: ಸೇತುವೆ ಮೇಲಿನಿಂದ ನದಿಗೆ ಜಿಗಿಯಲು ಯತ್ನಿಸುತ್ತಿದ್ದ ವ್ಯಕ್ತಿಯೋರ್ವನನ್ನು ಇಬ್ಬರು ಪತ್ರಕರ್ತರು ರಕ್ಷಿಸಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.
ಆಂಧ್ರದ ಭದ್ರಾಚಲಂ ನಲ್ಲಿ ಗೋದಾವರಿ ನದಿ ಸೇತುವೆ ಮೇಲೆ ಕುಳಿತಿದ್ದ ವ್ಯಕ್ತಿ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದ. ಈ ವೇಳೆ ಅದೇ ಮಾರ್ಗವಾಗಿ ಬಂದ ಪತ್ರಕರ್ತರಾದ ಮೊಹ್ಮದ್ ಅಬ್ದುಲ್ ಘನಿ, ಶೇಕ್ ಜಾಕಿರ್ ಎಂಬುವವರು ಸೇತುವೆಯ ಕಟ್ಟೆಯ ಮೇಲೆ ಕುಳಿತಿದ್ದ ವ್ಯಕ್ತಿಯನ್ನು ಗಮನಿಸಿದ್ದಾರೆ. ಕೆಳಗಿಳುಯುವಂತೆ ಹೇಳಿದ್ದಾರೆ.
ಆತ ಮಾತು ಕೇಳದೇ ತಾನು ನದಿಗೆ ಜಿಗಿಯುವುದಾಗಿ ಹೇಳಿದ್ದಾನೆ. ಆತನ ಮನವೊಲಿಸಲು ಪತ್ರಕರ್ತರು ಹರಸಾಹಸ ಮಾಡಿದ್ದಾರೆ. ಆದರೂ ಸೇತುವೆಯಿಂದ ಕೆಳಗಿಳಿದಿಲ್ಲ. ಈ ವೇಳೆ ಬೈಕ್ ನಲ್ಲಿ ಬಂದ ವ್ಯಕ್ತಿ ನಿಧಾನವಾಗಿ ಬೈಕ್ ನಲ್ಲಿಸಿ ಹಿಂಬದಿಂದ ಆತನನ್ನು ಹಿಡಿದಿದ್ದಾರೆ. ತಕ್ಷಣ ಸ್ಥಳದಲ್ಲಿದ್ದವರೆಲ್ಲರೂ ಹೋಗಿ ಆತನನ್ನು ಹಿಡಿದು ರಕ್ಷಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ