
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಕೆ.ಎಲ್.ಎಸ್. ಗೋಗಟೆ ತಾಂತ್ರಿಕ ಸಂಸ್ಥೆ (KLS GIT), ಬೆಳಗಾವಿ, ಫೆಬ್ರವರಿ 28, 2026 ರಂದು ಬೆಂಗಳೂರು ಹಳೆಯ ವಿದ್ಯಾರ್ಥಿಗಳ ಸಭೆಯನ್ನು ಯಶಸ್ವಿಯಾಗಿ ಆಯೋಜಿಸಿತು. 1984 ರಿಂದ 2021ರವರೆಗಿನ ವಿವಿಧ ಬ್ಯಾಚ್ಗಳ 250ಕ್ಕೂ ಹೆಚ್ಚು ಹಳೆಯ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಡಾ. ಅನುಪಮಾ ಅವಟಿ ಅವರು ಸ್ವಾಗತ ಭಾಷಣದಲ್ಲಿ ಹಳೆಯ ವಿದ್ಯಾರ್ಥಿಗಳ ಮಾರ್ಗದರ್ಶನದ ಮಹತ್ವವನ್ನು ವಿವರಿಸಿದರು. ಪ್ರಾಂಶುಪಾಲರಾದ ಡಾ. ಎಂ. ಎಸ್. ಪಾಟೀಲ ಅವರು ಸಂಸ್ಥೆಯ 1979ರಿಂದಲೂ ನಡೆದಿರುವ ಶೈಕ್ಷಣಿಕ ಮತ್ತು ಸಂಶೋಧನಾ ಸಾಧನೆಗಳನ್ನು ಹಂಚಿಕೊಂಡರು.
ಕರ್ನಾಟಕ ಲಾ ಸೊಸೈಟಿಯ ಅಧ್ಯಕ್ಷರಾದ ಪ್ರದೀಪ ಸಾವ್ಕರ್ ಅವರು ಉದ್ಯಮ –ಶೈಕ್ಷಣಿಕ ಸಂಬಂಧಗಳನ್ನು ಬಲಪಡಿಸುವ ಅಗತ್ಯವನ್ನು ಒತ್ತಿ ಹೇಳಿದರು. ಆಡಳಿತ ಮಂಡಳಿಯ ಅಧ್ಯಕ್ಷರಾದ ರಾಜೇಂದ್ರ ಬೆಳಗಾವ್ಕರ್ ಅವರು ತಂತ್ರಜ್ಞಾನದಲ್ಲಿ ನಡೆಯುತ್ತಿರುವ ವೇಗದ ಬದಲಾವಣೆಗಳಿಗೆ ಸಂಸ್ಥೆ ಹೊಂದಿಕೊಳ್ಳುತ್ತಿರುವುದನ್ನು ವಿವರಿಸಿದರು. ಯು. ಎನ್. ಕಲ್ಕುಂದ್ರಿಕರ್ ಅವರು ಹಳೆಯ ವಿದ್ಯಾರ್ಥಿಗಳ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸಾಧನೆಗಳನ್ನು ಮೆಚ್ಚಿದರು.
ಎಸ್. ವಿ. ಗಣಾಚಾರಿ (ಸೊಸೈಟಿ ಕಾರ್ಯದರ್ಶಿ), . ಆರ್. ಎಸ್. ಮುತಾಲಿಕ್, . ಎ. ಕೆ. ಆಳೂರ, ಪಿ. ಎನ್. ಕಠವಿ, ಪ್ರೊ. ಡಿ. ಎ. ಕುಲಕರ್ಣಿ ಮತ್ತು ಡಾ. ಅರುಣ್ ಕುಮಾರ್ ಹಾಜರಿದ್ದರು:
ಹಳೆಯ ವಿದ್ಯಾರ್ಥಿಗಳ ಸಂವಾದದಲ್ಲಿ ಏರ್ ಮಾರ್ಷಲ್ (ನಿವೃತ್ತ) ರಾಜಶೇಖರ್, ರಾಕೇಶ್ ತೆರ್ಗುಂಡಿ ಮತ್ತು ಡಿಜಿ ಯಾತ್ರೆ ಸಂಸ್ಥಾಪಕರಾದ ರಾಮ ಕುಂಚೂರ್ ತಮ್ಮ ಅನುಭವಗಳನ್ನು ಹಂಚಿಕೊಂಡರು.




