Kannada NewsKarnataka NewsLatestPolitics

*ನನ್ನ ಮಗ ಯಡಿಯೂರಪ್ಪರನ್ನು ನಂಬಿ ಮೋಸ ಹೋಗಿದ್ದಾನೆ; ಕೆ.ಎಸ್.ಈಶ್ವರಪ್ಪ ಆಕ್ರೋಶ*

ಪ್ರಗತಿವಾಹಿನಿ ಸುದ್ದಿ: ಲೋಕಸಭಾ ಚುನಾವಣೆಯಲ್ಲಿ ಪುತ್ರ ಕಾಂತೇಶ್ ಗೆ ಬಿಜೆಪಿ ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧ ಕೆಂಡಾಮಂಡಲರಾಗಿದ್ದಾರೆ.

Home add -Advt

ಕೆ.ಎಸ್.ಈಶ್ವರಪ್ಪ ಪುತ್ರ ಕಾಂತೇಶ್ ಹಾವೇರಿ ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಕೊನೇ ಕ್ಷಣದವರೆಗೂ ತಮ್ಮ ಪುತ್ರ ಕಾಂತೇಶ್ ಟಿಕೆಟ್ ಸಿಗುವ ನಿರೀಕ್ಷೆಯಲ್ಲಿದ್ದ ಈಶ್ವರಪ್ಪಗೆ ನಿರಾಸೆಯಾಗಿದೆ. ತನ್ನ ಮಗನಿಗೆ ಟಿಕೆಟ್ ಕೈತಪ್ಪಲು ಮಾಜಿ ಸಿಎಂ ಯಡಿಯೂರಪ್ಪ ಅವರೇ ಕಾರಣ ಎಂದು ಆಕ್ರೋಶ ವ್ಯಕಪಡಿಸಿದ್ದಾರೆ.

ಯಡಿಯೂರಪ್ಪ ಹಾಗೂ ಪುತ್ರರು ನಮಗೆ ಅನ್ಯಾಯ ಮಾಡಿದ್ದಾರೆ. ಹಾವೇರಿ ಕ್ಷೇತ್ರದ ಬಿಜೆಪಿ ಟಿಕೆಟ್ ನೀಡಿದರೆ ನಾನೇ ಕ್ಷೇತ್ರದಲ್ಲಿ ಓದಾಡಿ ಗೆಲ್ಲಿಸಿಕೊಂಡು ಬರುತ್ತೇನೆ ಎಂದು ಯಡಿಯೂರಪ್ಪ ಹೇಳಿದ್ದರು. ಕಾಂತೇಶ್ ಯಡಿಯೂರಪ್ಪ ಮಾತು ನಂಬಿ ವರ್ಷಾನುಗಟ್ಟಲೆ ಒಡಾಟ ನಡೆಸಿದ. ಆದರೆ ಈಗ ಲೋಕಸಭೆ ಟಿಕೆಟ್ ನೀಡದೇ ಮೋಸ ಮಾಡಿದ್ದಾರೆ. ನನ್ನ ಮಗ ಯಡಿಯೂರಪ್ಪ ಮಾತು ನಂಬಿ ಮೋಸ ಹೋಗಿದ್ದಾನೆ ಎಂದು ಕಿಡಿಕಾರಿದ್ದಾರೆ.

ಪ್ರತಾಪ್ ಸಿಂಹ, ಸಿ.ಟಿ.ರವಿ, ಸದಾನಂದಗೌದ ಹಲವರಿಗೆ ಟಿಕೆಟ್ ಮಿಸ್ ಆಗಿದೆ. ಎಲ್ಲರೂ ನೊಂದಿದ್ದಾರೆ. ನೊಂದರ ಧ್ವನಿಯಾಗಿ ಹೋರಟ ಮಾಡುವಂತೆ ಎಲ್ಲರೂ ಒತ್ತಾಯಿಸಿದ್ದಾರೆ. ಹಾಗಾಗಿ ನೊಂದವರ ಧ್ವನಿಯಾಗಿ ಹೋರಾಡುತ್ತೇನೆ. ಯಡಿಯೂರಪ್ಪ ಶೋಭಾಗೆ ಟಿಕೆಟ್ ಕೇಳಿದಷ್ಟು ನನ್ನ ಮಗನಿಗೆ ಕೇಳಿಲ್ಲ ಯಾಕೆ? ಈಗ ಎಂ ಎಲ್ ಸಿ ಮಾಡುತ್ತೇನೆ ಎಂದು ಹೇಳುತ್ತಿದ್ದಾರೆ. ಎಂ ಎಲ್ ಸಿ ಮಾತು ಮೂಗಿಗೆ ತುಪ್ಪ ಸವರುವ ಕೆಲಸವಷ್ಟೇ. ಯಡಿಯೂರಪ್ಪ ಈವರೆಗೂ ನನ್ನ ಬಳಿ ಒಂದು ಮಾತನಾಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

Related Articles

Back to top button