LatestUncategorized

*ಜಗದೀಶ್ ಶೆಟ್ಟರ್ ಗೆ ಬಹಿರಂಗ ಪತ್ರ ಬರೆಯುತ್ತೇನೆ ಎಂದ ಕೆ.ಎಸ್.ಈಶ್ವರಪ್ಪ ಹೇಳಿದ್ದೇನು?*

ಪ್ರಗತಿವಾಹಿನಿ ಸುದ್ದಿ; ಶಿವಮೊಗ್ಗ: ಮಾಜಿ ಸಿಎಂ ಜಗದೀಶ್ ಶೆಟ್ಟರ್ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರ್ಪಡೆಯಾಗಿರುವ ಹಿನ್ನೆಲೆಯಲ್ಲಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಕಿಡಿಕಾರಿದ್ದು, ನಿಮ್ಮ ಮೊಮ್ಮಗ ಕೂಡ ಛಿ ಥೂ ಅಂತ ಉಗಿತಾನೆ ಎಂದು ಕಿಡಿಕಾರಿದ್ದಾರೆ.

ಶಿವಮೊಗ್ಗದಲ್ಲಿ ಮಾತನಾಡಿದ ಈಶ್ವರಪ್ಪ, ಬಿಜೆಪಿಗೆ ಇಷ್ಟೆಲ್ಲ ಕೆಲಸ ಮಾಡಿ, ಕಾಂಗ್ರೆಸ್ ಗೆ ಏಕೆ ಹೋದ್ರಿ? ಅಂತಾ ನಿಮ್ಮ ಮೊಮ್ಮಗ ಕೇಳಿದ್ರೆ ಏನು ಹೇಳ್ತೀರಾ? ಅವನು ಸಹ ಛೀ ಥೂ ಅಂತಾನೆ. ನೀವು ಕ್ಷಮೆ ಕೇಳಿ. ಧರ್ಮ ಉಳಿಸಿದ, ತತ್ವ ಸಿದ್ಧಾಂತಗಳನ್ನು ಉಳಿಸಿದ ಬಿಜೆಪಿಗೆ ವಾಪಸ್ ಬನ್ನಿ. ಈಗಲೂ ಕಾಲ ಮಿಂಚಿಲ್ಲ ಎಂದು ಹೇಳಿದ್ದಾರೆ.

ಬಿಜೆಪಿಯಲ್ಲಿ ದೊಡ್ಡ ದೊಡ್ಡ ಭಾಷಣ ಮಾಡಿ ನೀವೇ ಜಾರಿಗೆ ತಂದ ಬಿಲ್ ನ್ನು ವಾಪಸ್ ಪಡೆಯಲು ಕಾಂಗ್ರೆಸ್ ನಿಂದ ಬೆಂಬಲಿಸ್ತೀರಾ? ಕೇವಲ ಒಂದು ಶಾಸಕ ಟಿಕೆಟ್ ಮುಖ್ಯವಲ್ಲ. ನಾನು ಜಗದೀಶ್ ಶೆಟ್ಟರ್ ಅವರಿಗೆ ಬಹಿರಂಗ ಪತ್ರ ಬರೆಯುತ್ತೇನೆ. ನನ್ನ ಪತ್ರಕೆ ಅವರು ಉತ್ತರ ಕೊಡಬೇಕು. ನನ್ನ ಪತ್ರದಿಂದ ಅವರಿಗೆ ನೋವಾಗಬಹುದು. ಆದರೆ ಅವರು ರಾಜೀನಾಮೆ ಕೊಟ್ಟದ್ದು ನನಗೆ ಆಘಾತವಾಯ್ತು. ಹಾಗಾಗಿ ನಾನು ಪತ್ರ ಬರೆಯುತ್ತೇನೆ ಎಂದರು.

https://pragati.taskdun.com/c-t-ravireactionjagadish-shettarlakshmana-savadi/

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button