Kannada NewsKarnataka NewsLatest

*ಬೆಳಗಾವಿಯಲ್ಲಿ “ಕಲಾ ಸಂತೆ” ಜನಪದ ಜಾತ್ರೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಮಹಿಳಾ ದಿನಾಚರಣೆಯ ಅಂಗವಾಗಿ ಬೆಳಗಾವಿಯಲ್ಲಿ ವಿಶಿಷ್ಟವಾದ “ಕಲಾ ಸಂತೆ – 2026” ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಜನಪದ ಸಂಸ್ಕೃತಿ, ಕಲೆ ಮತ್ತು ಮಹಿಳಾ ಉದ್ಯಮಿತ್ವವನ್ನು ಉತ್ತೇಜಿಸುವ ಉದ್ದೇಶದಿಂದ ಈ ಜಾತ್ರೆಯನ್ನು ನಡೆಸಲಾಗುತ್ತಿದೆ.

ಈ ಕಾರ್ಯಕ್ರಮವು ಮಾರ್ಚ್ 14 ಮತ್ತು 15 ರಂದು ಬೆಳಗಾವಿಯ ಎಸ್ ಜಿ ಬಿಐಟಿ ಕಾಲೇಜು ಆವರಣದಲ್ಲಿ ನಡೆಯಲಿದೆ. ಲಿಂಗಾಯುತ ಮಹಿಳಾ ಸಮಾಜ ಕಾರ್ಯಕ್ರಮ ಆಯೋಜಿಸಿದೆ. ಕಾರ್ಯಕ್ರಮವನ್ನು ಮಾಜಿ ಕುಲಪತಿ ಮೀನಾ ಚಂದಾವರಕರ್ ಉದ್ಘಾಟಿಸಲಿದ್ದು, ಅಲ್ಲಮಪ್ರಭು ಸ್ವಾಮಿಗಳು ಸಾನ್ನಿಧ್ಯ ವಹಿಸುವರು. ಶಾಸಕ ಆಸೀಫ್ ಸೇಠ್ ಮತ್ತು ಮರಾಠಾ ಮಂಡಳ ಅಧ್ಯಕ್ಷೆ ರಾಜಶ್ರೀ ಹಲಗೇಕರ್ ಅತಿತಿಗಳಾಗಿ ಪಾಲ್ಗೊಳ್ಳುವರು.

ಈ ಕಲಾ ಸಂತೆಯಲ್ಲಿ ಕೇವಲ ಬೆಳಗಾವಿಯ ಮಹಿಳೆಯರು ಮಾತ್ರವಲ್ಲದೆ ಸೊಂಡೂರು, ವಿಜಯಪುರ, ದಾವಣಗೆರೆ, ಧಾರವಾಡ ಹಾಗೂ ಮಹಾರಾಷ್ಟ್ರದ ಕೊಲ್ಲಾಪುರ ಸೇರಿದಂತೆ ವಿವಿಧ ಪ್ರದೇಶಗಳಿಂದ ಮಹಿಳಾ ಉದ್ಯಮಿಗಳು ಭಾಗವಹಿಸಲಿದ್ದಾರೆ. ತಮ್ಮ ಕೈಚಳಕದಿಂದ ತಯಾರಿಸಿದ ಹಸ್ತಕಲಾ ವಸ್ತುಗಳು, ಆಹಾರ ಪದಾರ್ಥಗಳು ಹಾಗೂ ಜನಪದ ಪರಂಪರೆಯ ಉತ್ಪನ್ನಗಳನ್ನು ಪ್ರದರ್ಶಿಸಿ ಮಾರಾಟ ಮಾಡುವ ಅವಕಾಶವನ್ನು ಈ ಜಾತ್ರೆ ಒದಗಿಸುತ್ತದೆ.

Home add -Advt

“ಕಲಾ ಸಂತೆ” ಒಂದು ವಿಭಿನ್ನ ಜನಪದ ಜಾತ್ರೆ ಆಗಿದ್ದು, ಸ್ಥಳೀಯ ಕಲೆ, ಸಂಸ್ಕೃತಿ ಮತ್ತು ಗ್ರಾಮೀಣ ಉದ್ಯಮಿತ್ವವನ್ನು ಉತ್ತೇಜಿಸುವ ಪ್ರಮುಖ ವೇದಿಕೆಯಾಗಲಿದೆ. ಈ ಜಾತ್ರೆಯಲ್ಲಿ ಜನಪದ ಕಲೆಗಳ ಪ್ರದರ್ಶನ, ವಿವಿಧ ಕೈಗಾರಿಕಾ ಉತ್ಪನ್ನಗಳು ಹಾಗೂ ಸಾಂಪ್ರದಾಯಿಕ ಆಹಾರ ಪದಾರ್ಥಗಳ ಸ್ಟಾಲ್‌ಗಳು ಕೂಡ ಇರಲಿವೆ.

ಈ ಜಾತ್ರೆಗೆ ಪುರುಷರು, ಮಹಿಳೆಯರು ಮತ್ತು ಮಕ್ಕಳಿಗೆ ಉಚಿತ ಪ್ರವೇಶ ವ್ಯವಸ್ಥೆ ಮಾಡಲಾಗಿದೆ. ಜನಪದ ಸಂಸ್ಕೃತಿಯ ಸೊಗಡನ್ನು ಅನುಭವಿಸುವುದರ ಜೊತೆಗೆ ಮಹಿಳಾ ಉದ್ಯಮಿಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸುವಂತೆ ಸಂಘಟಕರು ಮನವಿ ಮಾಡಿದ್ದಾರೆ.

Related Articles

Back to top button