Latest

ಡಿಸಿಎಂ ಬೇಜವಾಬ್ದಾರಿಗೆ ಜನರ ಆಕ್ರೋಶ

ಕೊವಿಡ್ ಎಂದು ಜಿಲ್ಲೆಗೆ ಬರದೇ ಉಪಚುನಾವಣೆ ಪ್ರಚಾರಕ್ಕೆ ಹೋದ ಕಾರಜೋಳ

 

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಪ್ರವಾಹದಿಂದ ಸಂಕಷ್ಟಕ್ಕೀಡಾಗಿರುವ ತಮ್ಮದೇ ಜಿಲ್ಲೆ ಕಲಬುರಗಿ ಜನರ ನೋವು ಆಲಿಸಲು ಬರದೇ ಉಪಚುನಾವಣೆಯ ಪ್ರಚಾರಕ್ಕೆ ತೆರಳಿರುವ ಜಿಲ್ಲಾ ಉಸ್ತುವಾರಿ ಸಚಿವ, ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರ ಬೇಜವಾಬ್ದಾರಿಗೆ ಆಕ್ರೋಶ ವ್ಯಕ್ತವಾಗಿದೆ.

ತಮಗೆ ಹಾಗೂ ತಮ್ಮ ಇಡೀ ಕುಟುಂಬಕ್ಕೆ ಕೊವಿಡ್ 19 ಸೊಂಕು ತಗಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದೇವೆ. ವೈದ್ಯರ ಸಲಹೆಯ ಮೇರೆಗೆ ಹೋಂ ಕ್ವಾರಂಟೈನ್‍ನಲ್ಲಿದ್ದೇವೆ. ಮೈಯಲ್ಲಿ ಸುಸ್ತು ಇರುವ ಕಾರಣ ಇನ್ನು ವಿಶ್ರಾಂತಿ ಪಡೆಯಬೇಕಿದ್ದು, ಪ್ರವಾಸ ಕೈಗೊಳ್ಳದಂತೆ ವೈದ್ಯರು ಸಲಹೆ ನೀಡಿರುವ ಹಿನ್ನೆಲೆಯಲ್ಲಿ ಜಿಲ್ಲೆಗಳಿಗೆ ಭೇಟಿ ನೀಡಲಾಗಿಲ್ಲ. ಆದರೆ ಜಿಲ್ಲಾಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಕ್ಷಣ ಕ್ಷಣದ ಮಾಹಿತಿ ಪಡೆದು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದ್ದೇನೆ ಎಂದಿದ್ದ ಡಿಸಿಎಂ ಕಾರಜೋಳ ಇದೀಗ ಶಿರಾ ಉಪಚುನಾವಣೆ ಪ್ರಚಾರದಲ್ಲಿ ತೊಡಗಿದ್ದಾರೆ.

ಈ ಬಗ್ಗೆ ಪ್ರಶ್ನಿಸಿಸಿದ ಸುದ್ದಿಗಾರರಿಗೆ ಕೊರೊನಾ ಸೋಂಕು ಬಂದರೆ ಏನೆಲ್ಲ ಸಮಸ್ಯೆಯಾಗುತ್ತೆ ಎಂಬುದು ನಿಮಗೂ ಗೊತ್ತು. ನಿಂತುಕೊಳ್ಳಲು ಕೂಡ ಕೈ ಕಾಲಿನಲ್ಲಿ ಶಕ್ತಿ ಇರಲ್ಲ. ಈಗಲೂ ನನಗೆ ಸುಸ್ತು ಇದೆ. ನಾನು ಚುನಾವಣಾ ಪ್ರಚಾರಕ್ಕಾಗಿ ಶಿರಾಗೆ ಬಂದಿಲ್ಲ. ಅಭ್ಯರ್ಥಿ ನಾಮಪತ್ರ ಸಲ್ಲಿಸುವ ವೇಳೆ ತೆರದವಾಹನದಲ್ಲಿ ಎಲ್ಲರೂ ಹೋಗಿದ್ದೇವೆ. ಅದನ್ನು ಚುನಾವಣಾ ಪ್ರಚಾರದಲ್ಲಿ ಭಾಗಿದ್ದೇನೆ ಎನ್ನಲು ಆಗಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.

Home add -Advt

Related Articles

Back to top button