Kannada NewsKarnataka NewsLatest
*ಕಲಬುರಗಿಗೂ ಕಾಲಿಟ್ಟ ‘ಐ ಲವ್ ಮೊಹಮ್ಮದ್’ ಬ್ಯಾನರ್: ಹಲವೆಡೆ ವಿವಾದಿತ ಬ್ಯಾನರ್ ಪ್ರತ್ಯಕ್ಷ*

ಪ್ರಗತಿವಾಹಿನಿ ಸುದ್ದಿ: ಉತ್ತರ ಪ್ರದೇಶದಲ್ಲಿ ಐ ಲವ್ ಮೊಹಮ್ಮದ್ ಬ್ಯಾನರ್ ವಿವಾದ, ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿರುವ ಬೆನ್ನಲ್ಲೇ ಇದೀಗ ದಕ್ಷಿಣ ಭಾರತಕ್ಕೂ ಹಬ್ಬುತ್ತಿದೆ. ಕಲಬುರಗಿ ಜಿಲ್ಲೆಯಲ್ಲಿಯೂ ಐ ಲವ್ ಮೊಹಮ್ಮದ್ ವಿವಾದಿತ ಪೋಸ್ಟರ್, ಬ್ಯಾನರ್ ಗಳು ಹೆಚ್ಚುತ್ತಿವೆ.
ಕಲಬುರಗಿ ಜಿಲ್ಲೆಯ ಸೇಡಂ ನಲ್ಲಿ ಕೆಲದಿನಗಳ ಹಿಂದೆ ವಿವಾದಿತ ಬ್ಯಾನರ್ ಅಳವಡಿಸಲಾಗಿತ್ತು. ಪೊಲೀಸರು ಅವುಗಳನ್ನು ತೆರವುಗೊಳಿಸಿದ್ದರು. ಇದೀಗ ಆಳಂದದಲ್ಲಿಯೂ ವಿವಾದಿತ ಬ್ಯಾನರ್ ಗಳು ಪ್ರತ್ಯಕ್ಷವಾಗಿವೆ.
ಆಲಂದದಲ್ಲಿ ಲಾಡ್ಲೆ ಮಶಾಕ್ ದರ್ಗಾ ಉರುಸ್ ಹಿನ್ನೆಲೆಯಲ್ಲಿ ದರ್ಗಾರ ಎದುರು ರಸ್ತೆಯಲ್ಲಿ ವಿವಾದಿತ ಐ ಲವ್ ಮೊಹಮ್ಮದ್ ಬ್ಯಾನರ್ ಅಳವಡಿಸಲಾಗಿದೆ. ವಿಶ್ಜಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಪೊಲೀಸರು ತಕ್ಷಣ ಬ್ಯಾನರ್ ಗಳನ್ನು ತೆರವು ಮಾಡಿದ್ದಾರೆ.