
ಪ್ರಗತಿವಾಹಿನಿ ಸುದ್ದಿ: ಮೂಢನಂಬಿಕೆ ನಿಷೇಧ ಕಾನೂನು ಜಾರಿಯಲಿದ್ದರೂ ರಾಜ್ಯದಲ್ಲಿ ಮೂಢನಂಬಿಕೆಗಳಿಗೆ ಅಮಾಯಕ ಜೀವಗಳು ಬಲಿಯಾಗುತ್ತಿರುವ ಪ್ರಕರಣ ನಡೆಯುತ್ತಲೇ ಇದೆ. ದೆವ್ವ ಬಿಡಿಸುವುದಾಗಿ ಹೇಳಿ ಮಹಿಳೆಯೊಬ್ಬಳನ್ನು ಕರೆದೊಯ್ದು ಪತಿಯ ಸಂಬಂಧಿಕರೇ ಹೊಡೆದು ಕೊಂದ ಘಟನೆ ನಡೆದಿದೆ.
ಕಲಬುರಗಿಯ ಆಳಂದ ಮೂಲದ ಮಹಿಳೆಯನ್ನು ಮಹರಾಷ್ಟ್ರದ ಮುರಮ್ ನಲ್ಲಿ ಹೊಡೆದು ಕೊಲೆ ಮಾಡಲಾಗಿದೆ. ಗಿಡ್ದಪ್ಪ ಎಂಬುವವರ ಪತ್ನಿ ಮುಕ್ತಾಭಾಯಿ (38) ಕೊಲೆಯಾದ ಮಹಿಳೆ.
ಗಿಡ್ದಪ್ಪ ಪತ್ನಿ ಮುಕ್ತಾಭಾಯಿ ಮನೆಯ ಅಂಗಳದಲ್ಲಿ ತಲೆ ಸುತ್ತಿಬಂದು ಬಿದ್ದಿದ್ದರು. ಮಹಿಳೆಯನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡುವ ಬದಲು ಆಕೆಗೆ ದೆವ್ವ ಹಿಡಿದಿದೆ ಎಂದು ಗಿಡ್ಡಪ್ಪ ಸಹೋದರ ಸಂಬಂಧಿ ಹೇಳಿದ್ದಾರೆ. ತಾವು ದೆವ್ವ ಬಿಡಿಸುವುದಾಗಿ ಹೇಳಿ ಬೇವಿನ ಕೋಲಿನಿಂದ ಹೊಡೆದಿದ್ದಾರೆ. ಮಹಿಳೆ ಮತ್ತಷ್ಟು ಅವಸ್ವಸ್ಥಳಾಗಿದ್ದಾಳೆ. ಬಳಿಕ ಮಹಿಳೆಯನ್ನು ಮಹಾರಾಷ್ಟ್ರಕ್ಕೆ ದೆವ್ವ ಬಿಡಿಸುವವರ ಬಳಿ ಕರೆದುಕೊಂಡು ಹೋಗುತ್ತೇವೆ ಎಂದು ಕರೆದೊಯ್ದಿದ್ದಾರೆ. ಅಲ್ಲಿಯೂ ಮಹಿಳೆಯನ್ನು ಮನಬಂದಂತೆ ದೊಣ್ಣೆಹಿಂದ ಹೊಡೆಯಲಾಗಿದೆ.
ಗಂಭೀರ ಸ್ಥಿತಿಯಲ್ಲಿದ್ದ ಮಹಿಳೆ ಬಗ್ಗೆ ಕೆಯ ತಾಯಿಗೆ ಕರೆ ಮಾಡಿ ಗಿಡ್ದಪ್ಪ ಸಹೋದರ ಮಾಹಿತಿ ನೀಡಿದ್ದಾನೆ. ತಕ್ಷಣ ಮಹಾರಾಷ್ಟ್ರಕ್ಕೆ ದೌಡಾಯಿಸಿದ ಮುಕ್ತಾಭಾಯಿ ತಾಯಿ ಮಗಳ ಸ್ಥಿತಿ ಕಂಡು ಆಸ್ಪತ್ರೆಗೆ ದಾಖಲಿಸಿದ್ದಾಳೆ. ಚಿಕಿತ್ಸೆ ವೇಳೆಯೇ ಮಹಿಳೆ ಕೊನೆಯುಸಿರೆಳೆದಿದ್ದಾಳೆ. ದೆವ್ವ ಬಿಡಿಸುವ ನೆಪದಲ್ಲಿ ಹೊಡೆದು ಮಹಿಳೆಯನ್ನು ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ.



