ಪ್ರಗತಿವಾಹಿನಿ ಸುದ್ದಿ: ಬಾವಿಗೆ ಬಿದ್ದು ಅಣ್ಣ-ತಂಗಿ ಸಾವನ್ನಪ್ಪಿರುವ ಘಟನೆ ಕಲಬುರ್ಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಪಟ್ಟಪಳ್ಳಿ ಗ್ರಾಮದಲ್ಲಿ ನಡೆದಿದೆ.
ಬಾವಿಗೆ ಬಿದ್ದ ತಂಗಿಯನ್ನು ರಕ್ಷಿಸಲು ಹೋಗಿದ್ದ ಅಣ್ಣ ಮೇಲೆ ಬರಲು ಸಾಧ್ಯವಾಗದೇ ಇಬ್ಬರೂ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ನಂದಿನಿ (18) ಹಾಗೂ ಅಣ್ಣ ಸಂದೀಪ್ (21) ಮೃತರು. ತಂಗಿ ನಂದಿನಿ ಮನೆ ಬಳಿ ಬಾವಿಗೆ ಹಾರಿದ್ದಾಳೆ. ವಿಷಯ ತಿಳಿಯುತ್ತಿದ್ದಂತೆ ಬಾವಿಗೆ ಇಳಿದು ಆಕೆಯನ್ನು ರಕ್ಷಿಸಿಸಲು ಅಣ್ಣ ಮುಂದಾಗಿದ್ದಾನೆ. ಈ ವೇಳೆ ಮೇಲೆ ಬರಲು ಸಾಧ್ಯವಾಗದೇ ಅಣ್ಣ-ತಂಗಿ ಇಬ್ಬರೂ ಬಾವಿಯಲ್ಲೇ ಕೊನೆಯುಸಿರೆಳೆದಿದ್ದಾರೆ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ