
ಪ್ರಗತಿವಾಹಿನಿ ಸುದ್ದಿ; ಕಲಬುರ್ಗಿ: ಪೊಲೀಸ್ ಕಾನ್ಸ್ ಟೇಬಲ್ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಕಲಬುರ್ಗಿಯಲ್ಲಿ ನಡೆದಿದೆ.
ಕಲಬುರ್ಗಿ ಸಂಚಾರಿ ಠಾಣೆ-1ರಲ್ಲಿ ಕಾನ್ಸ್ ಟೇಬಲ್ ಆಗಿದ್ದ ಚಂದ್ರಕಾಂತ್ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಅಸ್ವಸ್ಥ ಚಂದ್ರಕಾಂತ್ ಅವರನ್ನು ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೇಲಧಿಕಾರಿಗಳಿಂದ ಹಫ್ತಾ ವಸೂಲಿಗೆ ನೇಮಕ ಮಾಡಲಾಗಿದೆ ಎಂದು ಆರೋಪಿಸಿ ಕಾನ್ಸ್ ಟೇಬಲ್ ಚಂದ್ರಕಾಂತ್ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಚಂದ್ರಕಾಂತ್ ಅವರನ್ನು ಫರಹತಾಬಾದ್ ಠಾಣೆಗೆ ವರ್ಗಾವಣೆ ಮಾಡಿ ಪೊಲೀಸ್ ಆಯುಕ್ತ ಆರ್.ಚೇತನ್ ಆದೇಶ ಹೊರಡಿಸಿದ್ದರು.
ಅಧಿಕಾರಿಗಳು ತಮಗೆ ಬೇಡವಾದವರನ್ನು ವರ್ಗಾವಣೆ ಮಾಡಿಸುತ್ತಿದ್ದಾರೆ. ಕಲಬುರ್ಗಿ ಕಮಿಷನರೇಟ್ ವ್ಯಾಪ್ತಿಯಲ್ಲಿ 59 ಪೊಲೀಸರನ್ನು ವರ್ಗಾವಣೆ ಮಾಡಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳ ವಿರುದ್ಧ ಕಾನ್ಸ್ ಟೆಬಲ್ ಗಳು ಆರೋಪ ಮಾಡಿದ್ದಾರೆ.
ಅಲ್ಲದೇ ಮೇಲಧಿಕಾರಿಗಳು ಹಫ್ತಾ ವಸೂಲಿಗೆ ನೇಮಿಸುತ್ತಾರೆ. ಮರಳು ಮಾಫಿಯಾ, ವೈನ್ ಬಾರ್ ಗಳಿಂದ ವಸೂಲಿ ಮಾಡಿಸುತ್ತಾರೆ. ಬಳಿಕ ಹಿರಿಯ ನಾಯಕರು ಹಣ ಕೊಟ್ಟು ಬರುತ್ತಾರೆ. ಬಂದ ನಂತರ ಪಿಎಸ್ ಐ, ಸಿಪಿಐ, ಡಿವೈ ಎಸ್ ಪಿ ಹಫ್ತಾ ವಸೂಲಿ ಮಾಡಿಸುತ್ತಾರೆ. ಹಲವು ವರ್ಷಗಳಿಂದ ಒಂದೇ ಕಡೆ ಕೆಲಸ ಮಾಡುತ್ತಿದ್ದಾರೆ. ಇಂಥವರನ್ನು ಬೇರೆಡೆ ಕಳುಹಿಸುವವರೆಗೆ ವ್ಯವಸ್ಥೆ ಸುಧಾರಣೆ ಆಗಲ್ಲ ಎಂದು ಪೊಲೀಸ್ ಅಧಿಕಾರಿಗಳ ವಿರುದ್ಧ ಪಿಸಿ ಭೀಮಾನಾಯ್ಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ