Latest

ದೇವರ ಮೂರ್ತಿ ಪ್ರತಿಷ್ಠಾನೆ ವೇಳೆ ಸಿಡಿಮದ್ದು ಸ್ಫೋಟ; 12 ಭಕ್ತರಿಗೆ ಗಾಯ

ಪ್ರಗತಿವಾಹಿನಿ ಸುದ್ದಿ; ಕಲಬುರ್ಗಿ: ದೇವಿ ಮೂರ್ತಿ ಪ್ರತಿಷ್ಠಾಪನೆ ವೇಳೆ ಅವಘಡ ಸಂಭವಿಸಿದ್ದು, ಸಿಡಿಮದ್ದು ಸ್ಫೋಟಗೊಂಡು 12 ಭಕ್ತರು ಗಾಯಗೊಂಡಿರುವ ಘಟನೆ ಕಲಬುರ್ಗಿ ಜಿಲ್ಲೆಯ ಹೊನ್ನಕಿರಣಗಿ ಗ್ರಾಮದಲ್ಲಿ ನಡೆದಿದೆ.

ಹೊನ್ನಕಿರಣಗಿ ಗ್ರಾಮದಲ್ಲಿ ಮರಗಮ್ಮ ದೇವಿ ಮೂರ್ತಿ ಪ್ರತಿಷ್ಠಾಪನೆ ವೇಳೆ ಈ ಅವಘಡ ಸಂಭವಿಸಿದ್ದು, ಏಕಾಏಕಿ ಸಿಡಿಮದ್ದು ಸ್ಫೋಟಗೊಂಡ ಪರಿಣಾಮ ಸ್ಥಳದಲ್ಲಿದ್ದ 12 ಜನರು ಗಾಯಗೊಂಡಿದ್ದಾರೆ. ಅವರಲ್ಲಿ 8 ಜನರ ಸ್ಥಿತಿ ಗಂಭೀರವಾಗಿದೆ.

ಗಾಯಾಳುಗಳನ್ನು ಅಯ್ಯಪ್ಪ, ಸೈಬಣ್ಣಾ ರಾವೂತಪ್ಪ, ಖಾಜಾಸಾಬ್ ನದೀಮ್, ಬಸವರಾಜ್ ಸಂಗಪ್ಪ, ಬಸವರಾಹ್ ಹಣಮಂತ, ಮೆಹಬೂಬ್ ಪಟೇಲ್, ಮಹೇಶ್, ವಾಸುದೇವ, ಸಾಯಬಣ್ಣ ನಾಗಪ್ಪ, ಕಾಶಿನಾಥ, ನಿಂಗಣ್ಣ, ಮಹಂತೇಶ್ , ಶರಣಪ್ಪ ಎಂದು ಗುರುತಿಸಲಾಗಿದೆ.

ದೇವಿ ಮೂರ್ತಿ ಪ್ರತಿಷ್ಠಾಪನೆ ಹಾಗೂ ಜಾತ್ರೆ ಹಿನ್ನೆಲೆಯಲ್ಲಿ ಸಂಭ್ರಮಾಚರಣೆಗೆ ಸಿಡಿಮದ್ದು ಸಿಡಿಸುವವರನ್ನು ಗ್ರಾಮಸ್ಥರು ಕರೆಸಿದ್ದರು. ಆದರೆ ಬೆಂಕಿಯ ಕಿಡಿ ಸಿಡಿಮದ್ದಿಗೆ ತಗುಲಿ ಏಕಾಏಕಿ ಸ್ಫೋಟ ಸಂಭವಿಸಿದೆ ಎನ್ನಲಾಗಿದೆ. ಫರಹತಾಬಾದ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಯತ್ನ; ಹಲವು ರೈತರು ಪೊಲೀಸ್ ವಶಕ್ಕೆ

https://pragati.taskdun.com/latest/farmers-protestsugercane-pricehikebelagavi/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button