Belagavi NewsBelgaum NewsKannada NewsKarnataka NewsLatest

*ಕಲ್ಲೋಳಿ ಪಟ್ಟಣದಲ್ಲಿ 40ನೇ ನವರಾತ್ರಿ ಉತ್ಸವ ಆಯೋಜನೆ*

ಅ.15ರಿಂದ ಒಂಬತ್ತು ದಿನಗಳ ಕಾಲ ವಿವಿಧ ಮಠಾಧೀಶರ ಸಾನ್ನಿಧ್ಯದಲ್ಲಿ ದೇವಿ ಪುರಾಣ


ಪ್ರಗತಿವಾಹಿನಿ ಸುದ್ದಿ; ಮೂಡಲಗಿ: ತಾಲೂಕಿನ ಕಲ್ಲೋಳಿ ಪಟ್ಟಣದ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ 40ನೇ ವರ್ಷದ ನವರಾತ್ರಿ ಉತ್ಸವದ ಅಂಗವಾಗಿ ಶ್ರೀ ದೇವಿ ಪುರಾಣ ಮತ್ತು ಪ್ರವಚನ ಅ. 15 ರಿಂದ 24ರ ವರೆಗೆ ಒಂಬತ್ತು ದಿನಗಳ ಕಾಲ ವಿವಿಧ ಮಠಾಧೀಶರ ಸಾನ್ನಿಧ್ಯದಲ್ಲಿ ಜರುಗಲ್ಲಿದೆ ಎಂದು ನವರಾತ್ರಿ ಉತ್ಸವ ಸ್ವಾಗತ ಸಮೀತಿ ಅಧ್ಯಕ್ಷ ರಾವಸಾಹೇಬ ಬೆಳಕೂಡ ತಿಳಿಸಿದರು .


ಮೂಡಲಗಿ ತಾಲ್ಲೂಕಿನ ಕಲ್ಲೋಳಿ ಪಟ್ಟಣದ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು ಅ.15ರಿಂದ ಹುಬ್ಬಳ್ಳಿಯ ಜಡಿಸಿದ್ದಾಶ್ರಮದ ಶ್ರೀ ರಾಮನಂದ ಮಹಾಸ್ವಾಮೀಜಿಗಳು ಪ್ರವಚನ ನೀಡುವರು, ಅ.15ರಂದು ಅರಕೇರಿ ಅಮೋಘಸಿದ್ಧ ಪೀಠದ ಶ್ರೀ ಅವಧೂತ್ ಮಹಾರಾಜರು, ಮಲ್ಲಾಪುರ-ನೇಸರಗಿಯ ಶ್ರೀ ಚಿದಾನಂದ ಶ್ರೀಗಳು, ಅ.16ರಂದು ತಾಳಿಕೋಟೆಯ ಖಾಸ್ಗತೇಶ್ವರ ಮಠದ ಶ್ರೀ ಸಿದ್ದಲಿಂಗ ದೇವರು, ಅ.17ರಂದು ಅಥಣಿ ಮೋಟಗಿ ಮಠದ ಶ್ರೀ ಪ್ರಭು ಚನ್ನಬಸವ ಶ್ರೀಗಳು, ಅ.18ರಂದು ಶೇಗುಣಿಯ ವಿರಕ್ತ ಮಠದ ಶ್ರೀ ಡಾ.ಮಹಾಂತ ಪ್ರಭು ಶ್ರೀಗಳು, ಅ.೧೯ ರಂದು ಬಂಡೆಗಣಿಯ ಬಸವ ಗೋಪಾಲ ನೀಲ ಮಾಣಿಕ್ಯ ಮಠದ ದಾಸೋಹ ರತ್ನ ಅನ್ನದಾನೇಶ್ವರ ಶ್ರೀಗಳು, ಅ.20 ರಂದು ಶಿರಹಟ್ಟಿಯ ಭಾವೈಕ್ಯತೆ ಮಹಾ ಸಂಸ್ಥಾನ ಪೀಠದ ಜಗದ್ಗುರು ಪಕೀರ ದಿಂಗಾಲೇಶ್ವರ ಶ್ರೀಗಳು ಮತ್ತು ಕಿಲ್ಲಾ ತೋರಗಲ್ ಗಚ್ಚಿನ ಹಿರೇಮಠದ ಶ್ರೀ ಚನ್ನಮಲ್ಲ ಶಿವಾಚಾರ್ಯ ಶ್ರೀಗಳು, ಅ.21 ರಂದು ಕಕಮರಿಯ ರಾಯಲಿಂಗೇಶ್ವರ ಸಂಸ್ಥಾನ ಮಠದ ಶ್ರೀ ಅಭಿನವ ಗುರುಲಿಂಗ ಜಂಗಮ ಶ್ರೀಗಳು, ಅ.22ರಂದು ಹಂಚಿನಾಳ ಕೆ.ಎಸ್ ಭಕ್ತಿ ಯೋಗಾಶ್ರಮದ ಶ್ರೀ ಮಹೇಶಾನಂದ ಶ್ರೀಗಳು, ಅ.23 ರಂದು ಜಮಖಂಡಿಯ ಓಲೆ ಮಠದ ಶ್ರೀ ಚನ್ನಬಸವ ಶ್ರೀಗಳು ಆಗಮಿಸುವರು.


ಅ.15 ರಂದು ಬೆಳಿಗ್ಗೆ ದೇವಿ ಅಭಿಷೇಕ ಹಾಗೂ ಯಜ್ಞ , ಹೋಮ, ಹವನ, ಗಣಹೋಮ ಕಾರ್ಯಕ್ರಮ ವೇ.ಮೂ ಮೃತ್ಯುಂಜಯ ಹಿರೇಮಠ ಅವರಿಂದ ಜರುಗುವುದು. ಸಾಯಂಕಾಲ 4ನೂತನ ದೇವಿಯ ಮೂರ್ತಿ ಭವ್ಯ ಮೆರವಣಿಗೆಯು ಕುಂಭ ಮೇಳ, ಮುತ್ತೈದೆಯರಿಂದ ಆರತಿ ಸೇವೆ ಹಾಗೂ ವಿವಿಧ ವಾಧ್ಯ ಮೇಳದೊಂದಿಗೆ ದೇವಿಯ ದೇವಸ್ಥಾನಕ್ಕೆ ಬರಮಾಡಿಕೊಳ್ಳುವುದು. ಸಂಜೆ 6ಕ್ಕೆ ಗರ್ಭ ಗುಡಿಯಲ್ಲಿ ಘಟಸ್ಥಾಪನೆ, ದೇವಸ್ಥಾನದ ಜಿರ್ಣೋದ್ಧಾರ ಲೋಕಾರ್ಪಣೆ ನಂತರ ಉದ್ಘಾಟನಾ ಸಮಾರಂಭ ಜರುಗಲಿದೆ ಎಂದು ತಿಳಿಸಿದರು.


ಭಗವಂತ ಪತ್ತಾರ ಮಾತನಾಡಿ, ದೇವಸ್ಥಾನದ ಜಿರ್ಣೋದ್ಧಾರ ಲೋಕಾರ್ಪಣೆ ನಂತರ ಉದ್ಘಾಟನಾ ಸಮಾರಂಭದಲ್ಲಿ ಧಾರವಾಡ ಗ್ರಾಮೀಣ ಶಾಸಕ ವಿನಯ ಕುಲಕರ್ಣಿ, ಕಿತ್ತೂರ ಶಾಸಕ ಬಾಬಾಸಾಹೇಬ ಪಾಟೀಲ, ಸ್ವಾಗತ ಸಮೀತಿ ಅಧ್ಯಕ್ಷ ರಾವಸಾಹೇಬ ಬೆಳಕೂಡ ಭಾಗವಹಿಸುವರು.


ಪ್ರತಿ ದಿನ ಸಂಜೆ 7ಕ್ಕೆ ಕಲ್ಲೋಳಿಯ ಸಕಲ ಭಜನಾ ಮಂಡಳಿಗಳು ಭಾಗವಹಿಸುವವು, 40ನೇ ವರ್ಷದ ಪ್ರಯುಕ್ತ ಲೋಕ ಕಲ್ಯಾಣಕ್ಕಾಗಿ ದೇವಿಯ ಮೂರ್ತಿಗೆ 5001 ಮುತ್ತೈದೆಯರಿಂದ ಕುಂಕುಮಾರ್ಚನ ಕಾರ್ಯಕ್ರಮ 9ದಿನಗಳ ಪರಿಯಂತ ನಡೆಯುವುದು.


ಅ.19 ರಂದು ಗಂಗಾರತಿ ಕಾರ್ಯಕ್ರಮ ಜರುಗುವುದು, ಅ.23 ರಂದು ನವದುರ್ಗಿಯರ ಉಡಿ ತುಂಬುವುದು ಮತ್ತು ಅಂದು ಸಾಯಂಕಾಲ ದೇವಿಯ ಮೂರ್ತಿ ಮೇರವಣಿಗೆಯುವ ಹಾಗೂ ಮಹಾಪ್ರಸಾದ ಜರುಗುವುದು. ಅ.24ರಂದು ವಿಜಯ ದಶಮಿಯಂದು ಕಲ್ಲೋಳಿ ಹನುಮಂತ ದೇವರ ಹಾಗೂ ಮಹಾಲಕ್ಷ್ಮೀ ದೇವಿಯ ಪಲ್ಲಕ್ಕಿಗಳ ಭವ್ಯ ಮೆರವಣಿಗೆಯೊಂದಿಗೆ ಬನ್ನಿ ಮಂಟಪಕ್ಕೆ ತೇರಳಿ ಬನ್ನಿ ಮುರಿಯುವ ಕಾರ್ಯಕ್ರಮ ಜರುಗುವುದು ಎಂದರು.


ಈ ಸಮಯದಲ್ಲಿ ನಾರಾಯಣ ಪತ್ತಾರ, ಸುರೇಶ ಬಡಿಗೇರ, ಶೀತಲ ಅಥಣಿ, ರಾಮಪ್ಪ ಬೆಳಕೂಡ, ಅಜೀತ ಚಿಕ್ಕೋಡಿ, ಶಿವಾಂದ ಹೆಬ್ಬಾಳ, ಈರಣ್ಣ ಮುನ್ನೋಳಿಮಠ, ಸಿದ್ದು ಮಾಯನ್ನವರ, ಅಜೀತ ಮಾಯನ್ನವರ,ಮಾಯಪ್ಪ ಮಾಯನ್ನವರ, ಬುದ್ದಪ್ಪಾ ಮಾಯನ್ನವರ ಮತ್ತಿತರರು ಇದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button