
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಕಣಬರ್ಗಿ ಗ್ರಾಮದ ಸರ್ವೆ ನಂಬರಗಳಲ್ಲಿ ಒಟ್ಟು ೧೫೯ ಎಕರೆ- ೨೩ ಗುಂಟೆ-೮ ಆಣೆ ಕ್ಷೇತ್ರದಲ್ಲಿ ಪ್ರಾಧಿಕಾರ ಹಾಗೂ ರೈತರ ಸಹಭಾಗಿತ್ವದಲ್ಲಿ ಶೇಕಡಾ ೫೦;೫೦ ಅನುಪಾತದಲ್ಲಿ ವಸತಿ ಯೋಜನೆಯನ್ನು ಅನುಷ್ಠಾನಗೊಳ್ಳಿಸಲು ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ.
ಸದರಿ ಯೋಜನೆಯಲ್ಲಿ ಒಳಗೊಂಡ ಜಮೀನುಗಳ ಪೈಕಿ ಒಟ್ಟು ೨೯ಎಕರೆ-೧೬ಗುಂಟೆ-೦೬ಆಣೆ ಕ್ಷೇತ್ರದ ಜಮೀನುಗಳಿಗೆ ಉಚ್ಚ ನ್ಯಾಯಾಲಯದ ತಡೆಯಾಜ್ಞೆ ಇದ್ದು, ಸದರಿ ಜಮೀನನ್ನು ಹೊರತು ಪಡಿಸಿ ಉಳಿದ ಕ್ಷೇತ್ರವನ್ನು ಅಭಿವೃದ್ಧಿ ಪಡಿಸಲು ಸರ್ಕಾರದಿಂದ ಅನುವೋದನೆ ಪಡೆದು ಟೆಂಡರ್ ಕರೆಯಲಾಗಿದೆ.
ಸದರಿ ಯೋಜನೆಯ ಪ್ರಾಥಮಿಕ ಕಾಮಗಾರಿಯನ್ನು ೧೦ ದಿನಗಳಲ್ಲಿ ಪ್ರಾರಂಭಿಸಲು ನಿಯಮಾನುಸಾರ ಕ್ರಮ ವಹಿಸಲಾಗುವುದು ಎಂದು ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ