*’ಕನ್ನಡ ಗಡಿತಿಲಕ’ ಹಾಗೂ ‘ಜನ್ನಾ’ ಸಾಹಿತ್ಯ ಪ್ರಶಸ್ತಿ ಪ್ರಕಟ: ಇಬ್ಬರು ಸಾಹಿತಿಗಳು ಆಯ್ಕೆ*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ: ಬಿ ಎ ಸನದಿ ಸಾಂಸ್ಕೃತಿಕ ಪ್ರತಿಷ್ಠಾನ ಕರ್ನಾಟಕ ರಾಜ್ಯೋತ್ಸವ ಹಿನ್ನೆಲೆಯಲ್ಲಿ ಪ್ರತಿವರ್ಷ ಕೊಡಮಾಡುವ ಕನ್ನಡ ಗಡಿತಿಲಕ ಪ್ರಶಸ್ತಿಗೆ ಶಿರೀಷ ಅವರು ಆಯ್ಕೆಯಾಗಿದ್ದಾರೆ ಲೋಕೋಪಯೋಗಿ ಇಲಾಖೆಯಲ್ಲಿ ಕಚೇರಿ ಅಧೀಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಶಿರೀಷ ಬಹುಮುಖ ಪ್ರತಿಭೆ ಸಂಘಟಕರಾಗಿ ಸಾಹಿತಿಗಳಾಗಿ ಸಂಗೀತಗಾರರಾಗಿ ರಂಗ ಕರ್ಮಿಯಾಗಿ ಗುರುತಿಸಿಕೊಂಡಿದ್ದಾರೆ ಅವರು ಸಂಗೀತ ಆಧರಿಸಿ ಬರೆದ ಹಾರಿಹೋದ ಹಂಸ ಏಕಾಂಗಿ ,ಗುಜರಿ ತೋಡಿ ,ತಾನಸೇನ ಕೃತಿಗಳು ತುಂಬಾ ಜನಪ್ರಿಯವಾಗಿವೆ ಅವರ ಮಿಂಚು ನಾಟಕ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ದ ಪಠ್ಯವಾಗಿದೆ ಕರ್ನಾಟಕ ನಾಟಕ ಅಕಾಡೆಮಿ ಕರ್ನಾಟಕ ಚಲನಚಿತ್ರ ಅಕಾಡೆಮಿ ಹಾಗೂ ರಾಷ್ಟ್ರೀಯ ಸಿರಿಗನ್ನಡ ಪ್ರಶಸ್ತಿ ಇತ್ಯಾದಿ ಪ್ರಶಸ್ತಿಗಳಿಂದ ಪುರಸ್ಕೃತರಾಗಿದ್ದಾರೆ.
ಉದಯೋನ್ಮುಖ ಬರಹಗಾರರಿಗೆ ನೀಡುವ ರಾಜ್ಯಮಟ್ಟದ ಜನ್ನಾ ಸನದಿ ಸಾಹಿತ್ಯ ಪ್ರಶಸ್ತಿಗೆ ಶಶಿ ತರೀಕೆರೆ ಅವರ ಪ್ಯೂಪಾ ಕವನ ಸಂಕಲನ ಆಯ್ಕೆಯಾಗಿದೆ ಬೆಂಗಳೂರಿನ ಇಸ್ರೋದಲ್ಲಿ ಟೆಕ್ನಿಷಿಯನ್ ಆಗಿ ಸೇವೆ ಸಲ್ಲಿಸುತ್ತಿರುವ ಶಶಿ ಚಿಕ್ಕಮಗಳೂರಿನ ತರಿಕೇರಿಯವರು ಛಂದ ಪುಸ್ತಕ ಬಸವರಾಜ ಕಟ್ಟೀಮನಿ ಯುವ ಪುರಸ್ಕಾರ ಟೋಟೋ ಪ್ರಶಸ್ತಿ ಮುಂತಾದ ಪ್ರಶಸ್ತಿ ಗಳಿಗೆ ಭಾಜನರಾಗಿರುವ ಶಶಿ ತಮ್ಮ ಡುಮಿಂಗ್, ತಿರಾಮಿಸು ಕಥಾಸಂಕಲನಗಳಿಂದ ಜನಪ್ರಿಯರಾಗಿದ್ದಾರೆ.
ಇಬ್ಬರಿಗೂ ರವಿವಾರ ದಿ 21 /12/2025 ರಂದು ಬೆಳಗಾವಿಯಲ್ಲಿ ನಡೆವ ಸಮಾರಂಭದಲ್ಲಿ ನಗದು ಹಣ ಪ್ರಶಸ್ತಿ ಪತ್ರ ಸ್ಮರಣಿಕೆ ನೀಡಿ ಗೌರವಿಸಲಾಗುತ್ತದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಡಾ ರಾಮಕೃಷ್ಣ ಮರಾಠೆಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


