Film & EntertainmentKannada NewsKarnataka NewsLatest

*ಕಾಂತಾರಾ ಸಿನಿಮಾದ ಅಪ್ಪು ಕೋಣ ಸಾವು*

ಪ್ರಗತಿವಾಹಿನಿ ಸುದ್ದಿ: ರಿಷಬ್ ಶೆಟ್ಟಿ ನಿರ್ದೇಶಿಸಿ, ಅಭಿನಯಿಸಿದ್ದ ಕಾಂತಾರಾ ಸಿನಿಮಾದಲ್ಲಿ ಗಮನ ಸೆಳೆದಿದ್ದ ಕೋಣ ಮೃತಪಟ್ಟಿದೆ. ಹಲವು ಕಂಬಳ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಅಪ್ಪು ಹೆಸರಿನ ಈ ಕೋಣ ಸಾವನ್ನಪ್ಪಿದೆ.

2022ರಲ್ಲಿ ಬಿಡುಗಡೆಯಾಗಿ ಸೂಪರ್ ಹಿಟ್ ಆಗಿದ್ದ ಕಾಂತಾರಾ ಸಿನಿಮಾದಲ್ಲಿ ಭಾರಿ ಗಮನ ಸೆಳೆದಿದ್ದ ಅಪ್ಪು ಕೋಣ ಏಕಾಏಕಿ ಸಾವನ್ನಪ್ಪಿದೆ. ಕಾಂತಾರಾ ಸಿನಿಮಾದಲ್ಲಿ ಕರಾವಳಿ ಸಂಪ್ರದಾಯ, ಕಂಬಳ ದೃಶ್ಯಗಳು ಇದ್ದವು. ಕಂಬಳ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದ ಅಪ್ಪು ಕೋಣ ಮೃತಪಟ್ಟಿದೆ. ಕಾಂತಾರಾ ಸಿನಿಮಾದಲ್ಲಿ ಅಪ್ಪು ಕೋಣ ಹಾಗೂ ಕಾಲಾ ಕೋಣಗಳುಕಂಬಳ ದೃಶ್ಯಗಳಲ್ಲಿ ಗಮನ ಸೆಳೆದಿದ್ದವು. ಈಗ ಅಪ್ಪು ಕೋಣ ಸಾವನ್ನಪ್ಪಿದ್ದು, ಕೋಣದ ಮಾಲೀಕರು ಹಾಗೂ ಅಭಿಮಾನಿಗಳಿಗೆ ಬೇಸರ ತಂದಿದೆ.

ಅಪ್ಪು ಕೋಣ ಹಾಗೂ ಕಾಲಾ ಕೋಣಗಳು ಸಿನಿಮಾದಲ್ಲಿ ಮಾತ್ರವಲ್ಲ ನಿಜ ಜೀವನದಲ್ಲಿ ಚಾಂಪಿಯನ್ ಆಗಿದ್ದವು. ಹಲವಾರು ಕಂಬಳಗಳಲ್ಲಿ ಭಾಗವಹಿಸಿ ಈ ಕೋಣದ ಜೋಡಿ ಸಾಕಷ್ಟು ಪ್ರಶಸ್ತಿಗಳನ್ನು ಗೆದ್ದಿದ್ದವು. ಇದೀಗ ಅಪ್ಪು ಕೋಣ ಸಾವನ್ನಪ್ಪಿದೆ ಎಂದು ತಿಳಿದುಬಂದಿದೆ.

Home add -Advt

Related Articles

Back to top button